Site icon Ullalavani

ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್-ಗೈಡ್ ಪೂರಕ : ವಾಣಿ ಆಳ್ವ

UN NETWORKS

ತೊಕ್ಕೊಟ್ಟು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆಯ ವಾರ್ಷಿಕ ರ್ಯಾಲಿ ಕಾರ್ಯಕ್ರಮವು ತೊಕ್ಕೊಟ್ಟು ಹೋಲಿ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಳ್ಳಾಲ ನಗರ ಸಭೆಯ ಪೌರ ಆಯುಕ್ತರಾದ ವಾಣಿ ವಿ. ಆಳ್ವ ಇವರು ವಿದ್ಯಾರ್ಥಿಗಳು ಎಳವೆಯಲ್ಲೇ ಶಿಸ್ತು, ಮಾನವೀಯ ಮೌಲ್ಯಗಳು, ಧೈರ್ಯ, ಸೇವಾ ಗುಣ, ಹೊಂದಾಣಿಕೆ ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಈ ನೆಲೆಯಲ್ಲಿ ಸ್ಕೌಟ್-ಗೈಡ್ ಚಳುವಳಿ ಅತ್ಯುತ್ತಮ ವೇದಿಕೆಯಾಗಿದೆ ಎಂದರು.

ಅಧ್ಯಕ್ಷತೆಯನ್ನು ಹೋಲಿ ಏಂಜಲ್ಸ್ ಹಿ. ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಸಿಸ್ಟರ್ ಸೆವರಿನ್ ಫೆರ್ನಾಂಡಿಸ್ ವಹಿಸಿ ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಆರೋಗ್ಯಕರವಾದ ಜೀವನವನ್ನು ಸಾಗಿಸಲು ಸಾಧ್ಯವೆಂದರು. ಮುಖ್ಯ ಅತಿಥಿಯಾಗಿ ಸೈಂಟ್ ಸಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ನಥಾಲಿಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ವಾದ್ಯ ವೃಂದದಲ್ಲಿ ಸಹಕರಿಸಿದ ಜೋಯ್‍ಲ್ಯಾಂಡ್ ಶಾಲೆಯ ಮಕ್ಕಳನ್ನು ಅಭಿನಂದಿಸಲಾಯಿತು. ಜಿಲ್ಲಾ ಸಂಸ್ಥೆಯ ತರಬೇತಿ ಕೌನ್ಸಿಲರ್ ತ್ಯಾಗಂ ಹರೇಕಳ ಸರ್ವರನ್ನು ಸ್ವಾಗತಿಸಿದರು. ದೇರಳಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಗೈಡ್ ಶಿಕ್ಷಕಿ ಚಂದ್ರಕಲಾ ನಿರೂಪಿಸಿದರು. ರ್ಯಾಲಿಯ ನಾಯಕಿ ನಯನ ವಂದಿಸಿದರು.

Exit mobile version