UN NETWORKS
ದೇರಳಕಟ್ಟೆ : ಭಿನ್ನ ಕೋಮಿನ ಯುವಕರಿಬ್ಬರ ಮೇಲೆ ಮೂರು ಮಂದಿ ಯುವಕರ ತಂಡ ಹಲ್ಲೆ ನಡೆಸಿದ ಘಟನೆಗೆ ನಡೆದಿದ್ದು ಈ ಪ್ರಕರಣ ಸಂಬಂಧ ಶಾಂತಿನಗರ ನಿವಾಸಿ ಮಾಜಿ ರೌಡಿಶೀಟರ್ ಲುಕ್ ಮನ್ ಎಂಬಾತನನ್ನು ಬಂಧಿಸಲಾಗಿದೆ.ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಶನಿವಾರ ಬಂದಿದ್ದ ಯುವಕರ ಮೇಲೆ ಮೂವರು ಯುವಕರು ಹಲ್ಲೆಸಿದ್ದಾರೆ. ಹಲ್ಲೆಯಿಂದ ಯುವಕ ಗಾಯಗೊಂಡಿದ್ದು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.
ಕೇರಳದ ತ್ರಿಶೂರು ಮೂಲದ ಯುವಕರಿಬ್ಬರು ದೇರಳಕಟ್ಟೆಯ ಆಸ್ಪತ್ರೆಗೆ ಬಂದಿದ್ದು ಈ ವೇಳೆ ಪರಿಚಯಸ್ಥ ಹುಡುಗಿಯನ್ನು ಭೇಟಿ ಮಾಡಿ ಹೋಟೇಲ್ ನಲ್ಲಿ ಉಪಾಹಾರ ಸೇವಿಸುತ್ತಿದ್ದರು ಈ ಬಗ್ಗೆ ಹೋಟೆಲ್ ಸಿಬ್ಬಂದಿ ಒಬ್ಬಾತ ತನ್ನ ಆಪ್ತರಿಗೆ ಮಾಹಿತಿ ನೀಡಿದ್ದು ಅದರಂತೆ
ಮೂರು ಮಂದಿಯ ತಂಡ ಯುವಕರಿಗೆ ಹಲ್ಲೆ ನಡೆಸಿದೆ. ಯುವಕರ ಮೊಬೈಲ್ ಕಿತ್ತುಕೊಂಡಿದ್ದಾರೆ ಎನ್ನಲಾಗಿದ್ದು ಉಳ್ಳಾಲ ಠಾಣೆಯಲ್ಲಿ ಪಕರಣ ದಾಖಲಾಗಿದೆ.