ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಯೇನೆಪೋಯ ನರ್ಸಿಂಗ್ ಕಾಲೇಜು, ಯೇನೆಪೋಯ ನರ್ಸಿಂಗ್ ಶಾಲೆ ಮತ್ತು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶುಶ್ರೂಷಾ ಸೇವೆಗಳ ಇಲಾಖೆ ಸಹಯೋಗದೊಂದಿಗೆ ಯೇನೆಪೋಯ ವಿಶ್ವವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ಶುಶ್ರೂಷಕರ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಅಥೇನಾ ನರ್ಸಿಂಗ್ ಕಾಲೇಜ್ ಪ್ರಾಂಶುಪಾಲೆ ರೆವರೆಂಡ್ ಸಿಸ್ಟರ್ ಜಸಿಂತಾ ಡಿಸೋಜ ಭಾಗವಹಿಸಿದ್ದರು.
ಈ ಸಂದರ್ಭ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು. ಪರಿಷ್ಕೃತ ನಿಯಮಗಳು ಮತ್ತು ಶಾಸನಗಳು ಹಾಗೂ ಪಠ್ಯಗಳನ್ನೊಳಗೊಂಡ ಕೈಪಿಡಿಯನ್ನು ಬಿಡುಗಡೆಮಾಡಲಾಯಿತು.