UN NETWORKS
ಪಾವೂರು: ಅಧ್ಯಾಪಕರು ಎಂದಿಗೂ ವಿದ್ಯಾರ್ಥಿಗಳ ಬಳಿ ಜಾತಿ, ಧರ್ಮ ತೋರಿಸದೆ ಶಿಕ್ಷಣ ನೀಡುತ್ತಾರೆ, ಅದೇ ರೀತಿ ವಿದ್ಯಾರ್ಥಿಗಳೂ ಶಿಕ್ಷಕರನ್ನು ಗೌರವಿಸುವ ಭಾವನೆ ಹೊಂದಿದಾಗ ವಿದ್ಯೆ ತನ್ನಿಂತಾನೇ ತಲೆಗೆ ಹೋಗುತ್ತದೆ ಎಂದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ ಅಭಿಪ್ರಾಯಪಟ್ಟರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು ಉದ್ಘಾಟಿಸಿದರು. ಪಾವೂರು ಗ್ರಾಮ ಪಂಚಾಯಿತಿ ಸದಸ್ಯ ಐ.ಬಿ.ಹಸೈನಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕೆ.ಎಸ್., ಪಾವೂರು ಗ್ರಾಮ ಪಂಚಾಯಿತಿ ಸದಸ್ಯೆ ಸುನಿಯಾ ಲೋಬೋ, ಕೊಣಾಜೆ ವಲಯ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಶಂಕರಾನಂದ ಎನ್.ಇನವಳ್ಳಿ ಅತಿಥಿಗಳಾಗಿದ್ದರು. ವಿಜ್ಞಾನ ಶಿಕ್ಷಕ ಕರುಣಾ ಎಸ್. ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಉಷಾ ಎನ್. ವರದಿ ವಾಚಿಸಿದರು. ಶಿಕ್ಷಕಿ ಜಮೀಲಾ ವಂದಿಸಿದರು. ಆಶಾ ವೀರಾವಾಸ್ ಕಾರ್ಯಕ್ರಮ ನಿರೂಪಿಸಿದರು.
`ಒಂದು ಕಾಲದಲ್ಲಿ ಕೋಣೆಯಿಲ್ಲದೆ ಸೊರಗಿದ್ದ ಶಾಲೆಯತ್ತ ಅಧಿಕಾರಿಗಳತ್ತ ಗಮನ ಸೆಳೆಯಬೇಕು ಎನ್ನುವ ಕಾರಣಕ್ಕೆ ತಟ್ಟಿಯಲ್ಲಿ ನಡೆಸಲಾಗಿತ್ತು. ಅದರ ಫಲವಾಗಿ ಇಂದು ಮೂರು ಕೋಣೆಗಳು ಹೆಚ್ಚುವರಿಯಾಗಿ ಉಳಿದಿದೆ’
ಮೊಹಮ್ಮದ್ ಮೋನು, ತಾಲೂಕು ಪಂಚಾಯಿತಿ ಅಧ್ಯಕ್ಷ