Site icon Ullalavani

ಕಿನ್ಯ: ದ್ಸಿಕ್ರ್ ಮತ್ತು ಮುಹ್ಯಿದ್ದೀನ್ ರಾತೀಬ್ ಕಾರ್ಯಕ್ರಮ

UN NETWORKS

ಕಿನ್ಯ: ಧಾರ್ಮಿಕ ವಿಚಾರದಲ್ಲಿ ಭಿನ್ನತೆ ಕಲ್ಪಿಸದೇ ಆಚಾರ ವಿಚಾರಗಳನ್ನು ಬೆಳೆಸಿಕೊಳ್ಳಬೇಕು. ಫೇಸ್‍ಬುಕ್ ವಾಟ್ಸಾಪ್ ಇಸ್ಲಾಂನ ಮೂಲವಲ್ಲ ಎಂದು ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಹೇಳಿದರು.

ಅವರು ಬುಖಾರಿ ಜುಮಾ ಮಸಿದಿ ಬದ್ರಿಯಾ ನಗರ ಕಿನ್ಯ ಇದರ ಆಶ್ರಯದಲ್ಲಿ ಗುರುವಾರ ನಡೆದ ದ್ಸಿಕ್ರ್ ಮತ್ತು ಮುಹ್ಯಿದ್ದೀನ್ ರಾತೀಬ್ ಕಾರ್ಯಕ್ರಮದಲ್ಲಿ ಉದ್ಭೋದನೆ ಭಾಷಣ ಮಾಡಿದರು.ಸಯ್ಯಿದ್ ಸೈದಲವಿ ತಂಙಳ್ ಕಿನ್ಯ ದುವಾ ನೆರವೇರಿಸಿದರು. ಬುಖಾರಿ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬುಖಾರಿ ಮಸೀದಿಯ ಖತೀಬ್ ಉಸ್ಮಾನ್ ಸಖಾಫಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಬ್ಬಾಸ್ ಹಾಜಿ ನಾಟೆಕಲ್, ಕೆಎಸ್ ಅಹ್ಮದ್ ಕುಂಞ , ಅಶ್ರಫ್ ಹಾಜಿ ಮದೀನ, ಕಿನ್ಯ ಗ್ರಾ.ಪಂ. ಸದಸ್ಯ ಫಾರೂಕ್, ಉಪಾಧ್ಯಕ್ಷ ಸಿರಾಜುದ್ದೀನ್, ಇಸ್ಮಾಯಿಲ್ ಕಿನ್ಯ, ಮೂಸಾ ಕಿನ್ಯ ಉಪಸ್ಥಿತರಿದ್ದರು. ಕೆ.ಎಚ್. ಇಸ್ಮಾಯಿಲ್ ಸಅದಿ ಸ್ವಾಗತಿಸಿದರು. ಅಬ್ಬಾಸ್ ಹಾಜಿ ವಂದಿಸಿದರು.

Exit mobile version