ಕೋಟೆಕಾರು: ಬೈಕ್ ಅಪಘಾತದಲ್ಲಿ ಮೂವರು ಸಿಪಿಎಂ ಕಾರ್ಯಕತರು ಗಾಯಗೊಂಡಿರುವ ಘಟನೆ ಕೋಟೆಕಾರು ಬೀರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಜೆ ವೇಳೆ ಸಂಭವಿಸಿದೆ.
ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ವಲಯ ಸದಸ್ಯ ಸುಂದರ್ ಕುಂಪಲ, ಗ್ರಾಮ ಸದಸ್ಯ ಸೀತಾರಾಮ ಪೂಜಾರಿ ಮಾಡೂರು ಗಾಯಗೊಂಡವರು. ಪಕ್ಷದ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತೊಕ್ಕೊಟ್ಟು ಕಡೆಗೆ ತೆರಳಲು ಹೆದ್ದಾರಿ ದಾಟುವ ಸಂದರ್ಭ ತಲಪಾಡಿ ಕಡೆಯಿಂದ ಬರುತ್ತಿದ್ದ ಬೈಕ್ ಮೂವರಿಗೆ ಢಿಕ್ಕಿ ಹೊಡೆದಿದೆ. ಮೂವರನ್ನು ದೇರಳಕಟ್ಟೆ ಆಸ್ಪತ್ರೆಗೆ ಸ್ಥಳೀಯರು ಹಾಗೂ ಪಕ್ಷದ ಮುಖಂಡರು ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.