Site icon Ullalavani

ಕೈರಂಗಳ: ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಅಂತರ್ ರಾಜ್ಯ ಮಟ್ಟದ ಗ್ರಿಪ್ ಹಗ್ಗ ಜಗ್ಗಾಟ ಪಂದ್ಯಾಟ

UN NETWORKS

ಕೈರಂಗಳ: ಬಂಟ್ವಾಳ ತಾಲೂಕಿನ ಕೈರಂಗಳದ ಶಾರದಾ ಗಣಪತಿ ವಿದ್ಯಾಕೇಂದ್ರದ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ಗ್ರಿಪ್ ಹಗ್ಗ ಜಗ್ಗಾಟ ಪಂದ್ಯಾಟನಡೆಯಿತು.

ಪಂದ್ಯಾಕೂಟವನ್ನು ಶಾರದಾ ಗಣಪತಿ ಸಂಸ್ಥೆಯ ಪ್ರಾಂಶುಪಾಲ ದಿವ್ಯದೀಪ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಟಿ.ಜಿ ರಾಜಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಸದಸ್ಯ ನವೀನ್ ಪಾದಲ್ಪಾಡಿ, ಸುಂದರ ಪೂಜಾರಿ ಚೇಳೂರು, ಪ್ರಶಾಂತ್ ಗಟ್ಟಿ, ರಮೇಶ್ ಕುರ್ನಾಡು, ಶುಭ ಕೆ.ಹೆಚ್, ಗೋಪಾಲ ಮಿತ್ತಕೋಡಿ ಹಾಗೂ ದೀಪಕ್ ಕೋಟ್ಯಾನ್ ಸಜಿಪ ಭಾಗವಹಿಸಿದ್ದರು.

ಪಂದ್ಯಾಕೂಟದಲ್ಲಿ ಅಂತರ್ ರಾಜ್ಯದ ಒಟ್ಟು 26ತಂಡಗಳು ಭಾಗವಹಿಸಿ ಎಸ್‍ಜಿವಿಕೆ ಪ್ರಥಮ, ಶ್ರೀರಾಮ ಭಕ್ತಾಂಜನೇಯ ಬಿ.ಸಿ.ರೋಡ್ ದ್ವಿತೀಯ, ಆಂಜನೇಯ ಕಣ್ವತೀರ್ಥ ತೃತೀಯ, ಅರಸು ಕುರಿಯಡಿತ್ತಾಯ ಮಜಿ ಬೋಳ್ಯಾರು ಚತುರ್ಥ, ಜೈ ಭಾರ್ಗವ ಕುಂಜರಗಿರಿ ಪಂಚಮ, ಶ್ರೀರಾಮ ಬೆಜ್ಜ ಷಷ್ಟಮ, ಯುವಕ ಮಂಡಲ ನಡುಮೊಗರು ಸಪ್ತಮ ಪ್ರಶಸ್ತಿಗಳನ್ನು ಪಡೆದುಕೊಂಡರು.ಕಾರ್ಯಕ್ರಮದ ಸಮಾರೋಪದಲ್ಲಿ ವಿಜಯ್ ರೈ ಚೇಳೂರು, ಪ್ರಜಿತ್ ಶೆಟ್ಟಿ, ಮಾಧವ ಬೆಳ್ಚಾಡ, ಗಣೇಶ್ ಬೋಳ್ಯಾರು, ಚಂದ್ರಶೇಖರ ಮಜಿ ಬೋಳ್ಯಾರು, ಸೂರಜ್ ಗಾಣಿಗ ಕಣ್ವತೀರ್ಥ, ಮನೋಜ್ ಪಾಂಗಳ, ಸುನಿಲ್ ಅನುಗ್ರಹ ಚೇಳೂರು ವಿಜೇತರಿಗೆ ಬಹುಮಾನ ವಿತರಿಸಿದರು.

ದಿವಾಕರ್ ಉಪ್ಪಳ ಹಾಗೂ ಪ್ರವೀಣ್ ಕುರ್ನಾಡು ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದಲ್ಲಿ ತೀರ್ಪುಗಾರರಾಗಿ ರಾಮ ಸುವರ್ಣ ಹಾಗೂ ಧನಂಜಯ ಬೋಳ್ಯಾರು ಸಹಕರಿಸಿದರು.

Exit mobile version