Site icon Ullalavani

ದುಬೈಯಲ್ಲಿ ಯಶಸ್ವಿಯಾದ ರಕ್ತದಾನ ಶಿಬಿರ

UN NETWORKS

ದುಬೈ: ದುಬೈ ಕರ್ನಾಟಕ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ದುಬೈ ಮತ್ತು ಕಮ್ಯುನಿಟಿ ಡೆವಲಪ್ಮೆಂಟ್ ಅಥಾರಿಟಿ ದುಬೈ ಪ್ರಾಯೋಜಕತ್ವದಲ್ಲಿ ದುಬೈ ಹೆಲ್ತ್ ಅಥಾರಿಟಿ ಸಹಯೋಗದಲ್ಲಿ ಬ್ಲಡ್ ಡೋನರ್ಸ್ (ರಿ) ಮಂಗಳೂರು ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬರವು ದುಬೈಯ ಲತೀಫಾ ಹಾಸ್ಪಿಟಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಹಮ್ಮದ್ ಇಸ್ಮಾಯಿಲ್ (ಅಧ್ಯಕ್ಷರು ಕರ್ನಾಟಕ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ದುಬೈ.)
ರಕ್ತವನ್ನು ಯಾರಿಂದಲೂ ಉತ್ಪಾದಿಸಲು ಆಗೋದಿಲ್ಲ ರಕ್ತದಾನ ಮಾಡುವ ಮೂಲಕವೇ ಒಂದು ಜೀವವನ್ನು ಉಳಿಸಲು ಸಾಧ್ಯ ಹಾಗೂ ರಕ್ತದಾನ ಮಾಡಿದ ಮೇಲೆ ಆಗುವಂತಹ ಲಾಭದಾಯಕ ಅಂಶಗಳನ್ನು ಅವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ರಕ್ತದಾನದ ಮಹತ್ವದ ಕುರಿತು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಎಸ್ ಕೆ ಸಮೀರ್ ,ಬದ್ರಿಯಾ ಫ್ರೆಂಡ್ಸ್ ರಶೀದ್ ಬ್ಯಾರಿ(ರಾಶ್ ಬ್ಯಾರಿ) ಬ್ಯಾರಿ ನಿಖಹ್ ಹೆಲ್ಪ್ ಲೈನ್ ಸ್ಥಾಪಕ ಅಧ್ಯಕ್ಷರು, ಬ್ಲಡ್ ಡೋನಾರ್ಸ್ ಮಂಗಳೂರು,ನಿರ್ವಾಹಕರಾದ ಶಂಸುದ್ದೀನ್ ಪಿಲಿಗೂಡು ನಝೀರ್ ಬಿಕರ್ನಕಟ್ಟೆ,ಸಮೀರ್ ಕಡವಿನ ಬಾಗಿಲು, ಕೆ ಎಸ್ ಸಿ ಸಿ ಮ್ಯಾನೇಜರ್ ಮುಹಮ್ಮದ್ ಶಾಫಿ ,ಉದ್ಯಮಿ ಅಶ್ರಫ್ ಖಾನ್ ಹಾಗು ಉದ್ಯಮಿ ಲತೀಫ್ ಮೂಲ್ಕಿ ಉಪಸ್ಥಿತರಿದ್ದರು.ಶಿಬಿರದಲ್ಲಿ ಸುಮಾರು 135 ರಕ್ತದಾನಿಗಳು ರಕ್ತದಾನ ಮಾಡಿದರು. ಮುಹಮ್ಮದ್ ಫರಾಜ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಕರ್ನಾಟಕ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್,ಕಮ್ಯುನಿಟಿ ಡೆವಲಪ್ಮೆಂಟ್ ಅಥಾರಿಟಿ ಹಾಗು ಬ್ಲಡ್ ಡೋನರ್ಸ್ ಮಂಗಳೂರು ಧನ್ಯವಾದ ಸಮರ್ಪಿಸಿದೆ.

Exit mobile version