UN NETWORKS
ಮಂಗಳೂರು: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ವಾರ್ಷಿಕ ಕೌನ್ಸಿಲ್ ತಾಜುಲ್ ಉಲಮಾ ಸುನ್ನೀ ಸೆಂಟರ್, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಕಛೇರಿಯಲ್ಲಿ ಶಾಖಾ ಅಧ್ಯಕ್ಷ ನವಾಝ್ ಅಧ್ಯಕ್ಷತೆಯಲ್ಲಿ ನಡೆಯಿತು.
ನಂತರ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಮ್ರಾನ್ , ಉಪಾಧ್ಯಕ್ಷರುಗಳಾಗಿ ಹಸೈನಾರ್ ಉಸ್ತಾದ್, ಶಫೀಕ್, ಖಲೀಲ್, ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್, ಜೊತೆ ಕಾರ್ಯದರ್ಶಿಯಾಗಿ ವಾನಿಶ್, ಸೌಹಾನ್, ಅಫ್ರೀದ್, ಕೋಶಾಧಿಕಾರಿಯಾಗಿ ರಮೀಝ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಾಝ್, ಹೈಸ್ಕೂಲ್ ಕನ್ವೀನರಾಗಿ ಅಶ್ವಾನ್ , ಶಿಹಾನ್ ರವರನ್ನು ಒಳಗೊಂಡ 25 ಕಾರ್ಯಕಾರಿ ಸಮಿತಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಕಾರ್ಯದರ್ಶಿ ಖಲಂದರ್ ವಂದಿಸಿದರು.