ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಕುಮಾರಿ ರೂಪ ಆಂಬ್ಲಮೊಗರು ಇವರ ಮದುವೆ ಕಾರ್ಯಕ್ರಮಕ್ಕೆ ದಾನಿಗಳ ನೆರವಿನಿಂದ ಸಂಗ್ರಹಿಸಿದ ಸಹಾಯಧನವನ್ನು ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ (ರಿ) ಕುಂಪಲ ಇದರ ವತಿಯಿಂದ ಚೆಕ್ ಮುಖೇನ ಹಸ್ತಾಂತರಿಸುವ ಕಾರ್ಯಕ್ರಮ ಕೇಸರಿ ಸಭಾ ಭವನದಲ್ಲಿ ನಡೆಯಿತು.
ಕೇಸರಿ ಮಿತ್ರ ವೃಂದದ ಅಧ್ಯಕ್ಷರಾದ ಸತ್ಯನಾರಾಯಣ ಹೂಡೆ, ಮಾಜಿ ಅಧ್ಯಕ್ಷರಾದ ಬಿ.ನಾರಾಯಣ ಕುಂಪಲ ಚೆಕ್ ಹಸ್ತಾಂತರಿಸಿದರು.
ಕಾರ್ಯದರ್ಶಿ ನವೀನ್ ಕುಂಪಲ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ಚಂದ್ರ ಕುಂಪಲ ಈ ಸಂದರ್ಭದಲ್ಲಿ ಉಪಸ್ಥಿತರಿದದ್ದರು.