UN NETWORKS
ಮೊಂಟೆಪದವು: ಹಳೆವಿದ್ಯಾರ್ಥಿ ಸಂಘ , ಸರಕಾರಿ ಶಾಲಾ ಮತ್ತು ಪ.ಪೂ. ಕಾಲೇಜು ಮೊಂಟೆಪದವು ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಆದರ್ ಮುಲ್ಲರ್ ವೈದ್ಯಕೀಯ ಕಾಲೇಜು ಕಂಕನಾಡಿ ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಮೊಂಟೆಪದವು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಮೊಂಟೆಪದವು ಪ.ಪೂ. ಕಾಲೇಜು ಕಾರ್ಯಾಧ್ಯಕ್ಷ ಜಲೀಲ್ ಮಾತನಾಡಿ, ರಕ್ತದಾನ ಕಾರ್ಯಕ್ರಮ ಇದೆ ಎಂಧ ತಕ್ಷಣ ನಾನು ಪೂಣ್ ಸಹಕಾರ ನೀಡಿದ್ದೇನೆ ಇಂತಹ ಕಾರ್ಯಕ್ರಮ ಯಾವ ಸಂದರ್ಭದಲ್ಲಿ ಆಯೋಜಿಸಿದರೂ ನನ್ನ ಸಹಕಾರ ಇನ್ನೂ ಇದೆ. ಇಂತಹ ಕಾರ್ಯಕ್ರಮ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು.ಮುಖ್ಯ ಅತಿಥಿಗಳಾಗಿ ಹನೀಫ್ ಚಂದಹಿತ್ಲು, ರಹ್ಮಾನ್ ಚಂದಹಿತ್ಲು, ಸಿದ್ದೀಕ್ ಮಂಜೇಶ್ವರ, ಕಲಂದರ್ ಗಂಗರಮಜಲ್, ನಾಸಿರ್‍ಟಿಎಸ್, ಸಂಶುದ್ದೀನ್ ಯು.ಟಿ. , ರಾಜಾ ನಾಯ್ಕ್ ಮೋಂಟುಗೋಳಿ ಮೊದಲಾದವರು ಉಪಸ್ಥಿತರಿದ್ದರು.