Site icon Ullalavani

ಅಂದರ್ ಬಾಹರ್, ಐದು ಮಂದಿ ಅಂದರ್

UN NETWORKS

ಕೋಟೆಕಾರು: ಹಣ ಪಣಕ್ಕಿಟ್ಟು ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಕೋಟೆಕಾರು ಮಾಡೂರು ಬಲ್ಯದಲ್ಲಿ ಉಳ್ಳಾಲ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಆಟಕ್ಕೆ ಪಣವಾಗಿಟ್ಟ ನಗದು ಹಾಗೂ ಬಳಸಲಾದ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಭಾನುವಾರ ನಡೆದಿದೆ.

ಮಾಡೂರು ನಿವಾಸಿಗಳಾದ ನವೀನ್ ಕುಮಾರ್, ರತ್ನಾಕರ, ನಾರಾಯಣ ಮೊಗೇರ ಬಲ್ಯ, ಜಯರಾಜ್, ಅಹಮ್ಮದ್ , ಸುಧೀರ್ ಬಂಧಿತರು. ಬಂಧಿತರಿಂದ 8,200ರೂ. ನಗದು, ಬೈಕ್, ಮೊಬೈಲುಗಳು ಸೇರಿದಂತೆ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದರು.

Exit mobile version