Site icon Ullalavani

ಯೆನೆಪೋಯ ವಿ.ವಿ ಯಿಂದ ಕ್ರೀಡೆಗೆ ಸ್ಪೂರ್ತಿ : ಡಾ.ಯು.ಟಿ. ಇಫ್ತಿಕಾರ್ ಅಲಿ

UN NETWORKS

ಉಳ್ಳಾಲ: ಕ್ರೀಡಾ ಕ್ಷೇತ್ರಕ್ಕೆ ಯೆನೆಪೋಯ ವಿಶ್ವವಿದ್ಯಾಲಯ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತೊಡಗಿಸಲು ಅವಕಾಶ ದೊರೆತಿದೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಅಲಿ ಅಭಿಪ್ರಾಯಪಟ್ಟರು.

ಅಂತರ್ ಕಾಲೇಜು ಫಿಸಿಯೋಥೆರಪಿ ಕ್ರಿಕೆಟ್ ಪಂದ್ಯಾಟ ಚ್ಯಾಂಪ್-ಯೆನ್ಸ್ ಟ್ರೋಫಿ 2018 ದೇರಳಕಟ್ಟೆ ಯೆನೆಪೋಯ ದ ಸಾಕ್ಸರ್ ಗ್ರೌಂಡಿನಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.ಫಿಸಿಯೋಥೆರಪಿ ವಿಭಾಗದಲ್ಲಿ ಕಲಿಕೆಯೇ ಹೆಚ್ಚಿದ್ದ ಕಾಲವೊಂದಿತ್ತು. ಈ ವೇಳೆ ಬೆರಳೆಣಿಕೆಯ ತಂಡಗಳು ಮಾತ್ರ ಪಂದ್ಯಾಟಗಳಲ್ಲಿ ಭಾಗವಹಿಸುತ್ತಿದ್ದವು. ಆದರೆ ಇದೀಗ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ಫಿಸಿಯೋಥೆರಪಿ ವಿಭಾಗವೂ ನೀಡುತ್ತಿದೆ. ಇದರಿಂದ ಯೆನೆಪೋಯ ಆಯೋಜಿಸಿರುವ ಟ್ರೋಫಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿರುವುದು ಸಾಕ್ಷಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಅಂತರಾಷ್ಟ್ರೀಯ ದಿವ್ಯಾಂಗಿಗಳ ಕ್ರಿಕೆಟ್ ಆಟಗಾರ ವಿಜಯಕಾಂತ್ ತಿವಾರಿ ಮಾತನಾಡಿ ಕ್ರಿಕೆಟ್ ಆಟದಲ್ಲಿ ಹೆಣ್ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಬಹಳಷ್ಟು ಕಡಿಮೆ. ಆದರೆ ಯೆನೆಪೋಯ ಆಯೋಜಿಸಿರುವ ಟ್ರೋಫಿಯಲ್ಲಿ ಪುರುಷ ತಂಡಗಳಿಗೆ ಸಮಾನರಾಗಿ ಮಹಿಳಾ ತಂಡಗಳು ಭಾಗವಹಿಸಿರುವುದು ಉತ್ತಮ ಬೆಳವಣಿಗೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೆನೆಪೋಯ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಕುಲಸಚಚಿವ ಡಾ. ಕೆ.ಯಸ್ ಗಂಗಾಧರ ಸೋಮಯಾಜಿ ವಹಿಸಿದ್ದರು.
ಅಂತರಾಷ್ಟ್ರೀಯ ಪ್ಯಾರಾ ಅಥ್ಲೇಟ್ ಎಂ.ಆರ್ ಮಹೇಶ್ ಗೌಡ, ವೃತ್ತಿಪರ ಕ್ರಿಕೆಟ್ ಆಟಗಾರ ಮತ್ತು ಆರ್.ಎಂ ಸ್ಪೋಟ್ರ್ಸ್ ಸ್ಥಾಪಕ ರಾಜೀವ್ ಮಿಶ್ರಾ ಮುಖ್ಯ ಅತಿಥಿಗಗಿದ್ದರು. ಯೆನೆಪೋಯ ಕ್ರೀಡಾ ಸಮಿತಿ ಮುಖ್ಯಸ್ಥ ಮಹಮ್ಮದ್ ಬಾವಾ .ಪಿ, ಯೆನೆಪೋಯ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಯಸ್. ಪದ್ಮಕುಮಾರ್, ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕ ಶಿಲ್ಪಾಶ್ರೀ, ಕಣಚೂರು ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ.ಸುಹೈಲ್, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಶೇಮ್‍ಜಾಝ್ ಅರಕ್ಕಲ್ ಎಂ., ಸಂಘಟನಾ ಕಾರ್ಯದರ್ಶಿ ಖಾಜಾ ಮೊಹಿನುದ್ದೀನ್, ಕ್ರೀಡಾ ಕಾರ್ಯದರ್ಶಿ ಶೇಖ್ ರಶೀದ್, ಉಪಸ್ಥಿತರಿದ್ದರು.

ಸಂಸ್ಥೆಯ ವತಿಯಿಂದ ಡಾ.ಯು.ಟಿ. ಇಫ್ತಿಕಾರ್ ಅಲಿ, ವಿಜಯಕಾಂತ್ ತಿವಾರಿ, ಎಂ.ಆರ್ ಮಹೇಶ್ ಗೌಡ, ರಾಜೀವ್ ಮಿಶ್ರಾ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಯೆನೆಪೋಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 17 ಮಂದಿ ದಿವ್ಯಾಂಗಿ ಸಿಬ್ಬಂದಿಗಳನ್ನು ಗೌರವಿಸಲಾಯಿತು ಮತ್ತು ಗಾಲಿ ಖುರ್ಚಿ ವಿತರಿಸಲಾಯಿತು. ಯು.ಟಿ.ಇಫ್ತಿಕಾರ್ ಆಲಿ 17 ಮಂದಿ ಸಿಬ್ಬಂದಿಗೆ ಸ್ವಂತ ನಗದು ನೀಡಿ ಪುರಸ್ಕರಿಸಿದರು.

Exit mobile version