ದೇರಳಕಟ್ಟೆ: ಧಾರ್ಮಿಕತೆಯನ್ನು ಧ್ವಂಸ ಮಾಡುವ ಮೆಟೀರಿಯಲಿಸಂ ಸಿದ್ಧಾಂತವನ್ನು ಹಿಮ್ಮೆಟ್ಟಿಸೋಣ ಎಂಬ ದ್ಯೇಯ ವಾಕ್ಯದೊಂದಿಗೆ ಸಮಸ್ತ ಶರೀಅತ್ ಸಂರಕ್ಷಣಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ದಿನಾಂಕ 09-12-2018ನೇ ಆದಿತ್ಯವಾರ ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿರುವ ಶರೀಅತ್ ಸಂರಕ್ಷಣಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕರೆ ನೀಡಿದೆ.
ಅಸೋಸಿಯೇಷನ್ ನ ಅಧ್ಯಕರಾದ ಇಸ್ಮಾಯಿಲ್ ಹಾಜಿ ದೇರಳಕಟ್ಟೆ, ಗೌರವ ಅಧ್ಯಕ್ಷ ರಾದ ಮಜಲ್ ಅಬ್ಬಾಸ್ ಹಾಜಿ , ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ , ಕೋಶಾಧಿಕಾರಿ ಅಬೂಸ್ವಾಲಿಹ್ ಹಾಜಿ ಕುರಿಯಕ್ಕಾರ್ , ಉಪಾಧ್ಯಕ್ಷರುಗಳಾದ ಸ್ವಾಗತ್ ಅಬೂಬಕ್ಕರ್ ಹಾಜಿ , ಎಂ.ಎ.ಅಬ್ದುಲ್ಲಾ ಬೆಳ್ಮ ,ಕಾರ್ಯದರ್ಶಿ ಎಚ್ .ಎಂ. ಮಹಮ್ಮದ್ ಮಾಸ್ಟರ್ ಮಲಾರ್ , ಪತ್ರಿಕಾ ಕಾರ್ಯದರ್ಶಿ ಹಮೀದ್ ಮದ್ಪಾಡಿ ,ಶರೀಅತ್ ಸಂರಕ್ಷಣಾ ಸಮಾವೇಶ ಪ್ರಚಾರ ಸಮ್ಮೇಳನದ ಸ್ವಾಗತ ಸಮಿತಿ ದೇರಳಕಟ್ಟೆ ರೇಂಜ್ ಇದರ ಚೇಯರ್ ಮ್ಯಾನ್ ಅಬೂಬಕ್ಕರ್ ಹಾಜಿ ನಾಟೆಕಲ್ , ಜನರಲ್ ಕನ್ವೀನರ್ ಲತೀಫ್ ದಾರಿಮಿ ರೆಂಜಾಡಿ ಮತ್ತಿತರ ನೇತಾರರು ಕರೆ ನೀಡಿರುವರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಎಲ್ಲಾ ಮುಸಲ್ಮಾನ ಭಾಂದವರು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಶರೀಅತ್ ಸಂರಕ್ಷಣಾ ಸಮ್ಮೇಳನದಲ್ಲಿ ಭಾಗಿಯಾಗಿ ನಮ್ಮ ಸಾಂವಿಧಾನಿಕ ಹಕ್ಕುಗಳ ಸಂರಕ್ಷಣೆಗಾಗಿ ಸಹೋದರರಾದ ನಾವೆಲ್ಲರೂ ಈ ಸಮ್ಮೇಳನದಲ್ಲಿ ಕೈಜೋಡಿಸಿ ಯಶಸ್ವಿಗೊಳಿಸೋಣವೆಂದು ವಿನಂತಿಸಿಕೊಂಡಿರುವರು.