Site icon Ullalavani

` ಹಿಂದೂ ಸಂಘಟಿತರಾಗದೇ ಇದ್ದಲ್ಲಿ ಶಬರಿಮಲೆ ದಕ್ಷಿಣದ ಅಯೋಧ್ಯೆ ಆಗಬಹುದು ‘: ಪತ್ರಕರ್ತ ಶ್ರೀಕಾಂತ್ ಶೆಟ್ಟಿ

UN NETWORKS

ಉಳ್ಳಾಲ: ಹಿಂದೂಗಳು ಸಂಘಟಿತರಾಗದೇ ಇದ್ದಲ್ಲಿ ಶಬರಿಮಲೆ ದಕ್ಷಿಣದ ಅಯೋಧ್ಯೆ ಆಗುವುದರಲ್ಲಿ ಸಂಶಯವಿಲ್ಲ. ಬೇರೆ ಸಮುದಾಯದ ಮಹಿಳೆಯರು ಹೋರಾಟದ ಹೆಸರಲ್ಲಿ 800 ವರ್ಷಗಳ ಪಾವಿತ್ರ್ಯತೆಯನ್ನು ಹಾಳುಗೆಡವಲು ಯತ್ನಿಸುತ್ತಿರುವುದು ಹಿಂದೂ ಸಮಾಜ ಒಗ್ಗಟ್ಟಾಗಲು ನೀಡಿರುವ ಸೂಚನೆ ಎಂದು ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ.

ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಹಿಂದು ಜಾಗರಣ ವೇದಿಕೆ ಓಂ ಶಕ್ತಿ ಘಟಕ ಕುಂಪಲ ಇವರ ಆಶ್ರಯದಲ್ಲಿ ಕುಂಪಲದ ಆಶ್ರಯ ಕಾಲನಿ ಮೈದಾನದಲ್ಲಿ ಜರಗಿದ 9 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಬರಿಮಲೆಯನ್ನು ಪಾವಿತ್ರ್ಯತೆಯನ್ನು ಕೆಡವಲು ಅಲ್ಲಿನ ಸಿಪಿಎಂ ಸರಕಾರ ಮತ್ತು ಕೆಲ ಹಿಂದೂ ವಿರೋಧಿಗಳಿಂದ ನಡೆಯುತ್ತಿದೆ. ಇದು ಮುಂದುವರಿದರೆ ದೇಶದ ದಕ್ಷಿಣದ ಅಯೋಧ್ಯೆ ಆಗುವುದರಲ್ಲಿ ಸಂಶಯವಿಲ್ಲ. ಶಬರಿಮಲೆ ವಿಚಾರದಲ್ಲಿ ಇದೀಗ ಕೇರಳದಲ್ಲಿ ರಾಷ್ಟ್ರೀಯತೆ ವಿಜೃಂಭಿಸುತ್ತಿದೆ. ಹಿಂದೂಗಳು ಎಲ್ಲರೂ ಒಗ್ಗಟ್ಟಾಗುವ ಅನಿವಾರ್ಯತೆ ಎದುರಾಗಿದೆ. ಬಾಬರಿ ಮಸೀದಿ ಧ್ವಂಸ ಹಿನ್ನೆಲೆಯಲ್ಲಿ ನಡೆಯುತ್ತಿರುವ ಜಾತ್ಯಾತೀತವಾದಿಗಳು ಬಂಟರ, ಬಿಲ್ಲವರ, ಬ್ರಾಹ್ಮಣರ ಸಮಾಜದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡುತ್ತಾರೆ. ಆದರೇ ಅದೇ ವಾದಿಗಳು ಹಿಂದುಗಳು ಸಂಘಟಿತರಾದಾಗ ಸೇರುತ್ತಿಲ್ಲ. ಬಾಲಿ, ಬೋರ್ನ, ಮೆಕ್ಸಿಕೋ, ಫಿಲಿಪೇನ್ಸ್ ಎಲ್ಲವೂ ಹಿಂದೆ ಹಿಂದೂ ರಾಷ್ಟ್ರಗಳು ಆಗಿತ್ತು. ಇಂಡೋನೇಷ್ಯಾದ ಬಾಲಿ, ಜರ್ಮನಿಯ ಬೋರ್ನಾ, ಮೆಕ್ಸಿಕೋ, ಪಿಲಿಪೇನ್ಸ್ ನಲ್ಲಿ ಈಗಲೂ ಹಿಂದು ದೇವರುಗಳ ಹೆಸರುಗಳು ಸೇರಿದಂತೆ ಕುರುಹುಗಳು ಇವೆ.

ಇದು ಹಿಂದೂ ರಾಷ್ಟ್ರಕ್ಕೆ ಪೂರಕವಾಗಿದೆ. ಕೇರಳದ ಮಲಬಾರ್ ನಿಂದ ಹಲವು ಮಂದಿ ಐಸಿಸ್ ಗೆ ತರಬೇತಿ ಪಡೆದುಹೋಗುತ್ತಾರೆ, ಇನ್ನೊಂದು ಕಡೆ ಭಟ್ಕಳದಲ್ಲಿ ಹಲವು ಉಗ್ರರೇ ನೆಲೆಯೂರಿದ್ದಾರೆ. ಇವೆರಡರ ನಡುವೆ ಪವಿತ್ರ ತುಳುನಾಡು ನೆಲೆಯೂರಿ ಜನ ಆತಂಕದ ವಾತಾವರಣದಲ್ಲಿ ಬಾಳುವಂತಹ ಸ್ಥಿತಿಯಿದೆ. ಸಂಸ್ಕøತಿ, ಸಭ್ಯತೆಯನ್ನು ಮರೆಯುವ ಕಾಲ ಇದಾಗಿದೆ. ವಾಟ್ಟ್ಯಾಪ್, ಫೇಸ್ ಬುಕ್ ನಲ್ಲೇ ಹೆತ್ತವರು ಮಕ್ಕಳ ಜೊತೆಗೆ ಸಂಭಾಷಣೆ ನಡೆಸುವಂತಹ ದುರಾವಸ್ಥೆ ಇದೆ. ಸಂಬಂಧಗಳು ಕಡಿಮೆಯಾಗುತ್ತಿದೆ. ಹೆತ್ತವರನ್ನು ವೃದ್ಧಾಶ್ರಮಕ್ಕೆ ಹಾಕುವ ಕೆಲಸಗಳಾಗುತ್ತಿವೆ. ಮದ್ಯವರ್ಜನ ಶಿಬಿರಗಳಲ್ಲಿ ಯುವಕರೇ ಹೆಚ್ಚಾಗಿ ಶಿಬಿರಾರ್ಥಿಗಳಾಗುತ್ತಿದ್ದಾರೆ. ಇಂದಿನ ಮೆಹಂದಿ ಕಾರ್ಯಕ್ರಮಗಳಲ್ಲಿ ಯುವಕರು ಕುಡಿಯುವುದನ್ನು ಕಲಿಯುವಂತಹ ಸಂಸ್ಕøತಿ ಹಿಂದೂ ಸಮಾಜದಲ್ಲಿ ಬೆಳೆದು ನಿಂತಿದೆ. ಮನೆಯಲ್ಲಿ ಧಾರವಾಹಿಗಳು, ಬ್ರೇಕಿಂಗ್ ವಾರ್ತೆಗಳನ್ನು ನೋಡುವ ಬದಲಾಗಿ ಸಂಸ್ಕಾರವನ್ನು ಕಲಿಸುವ ಕಾರ್ಯ ಆಗಬೇಕಿದೆ. ಹಿಂದು ಸಂಘಟನೆ ಯುವಕರ ಹೋರಾಟಗಳು ವಾಟ್ಸ್ಯಾಪ್, ಫೇಸ್ ಬುಕ್ ಗಳಿಗೆ ಸೀಮಿತವಾಗಿರಬಾರದು.

ಬಾಬರಿ ಮಸೀದಿ ಧ್ವಂಸ ಪ್ರಕರಣ ಹಿಂದೂ ಜನರ ಪೌರುಷದ ಪ್ರತೀಕವಾಗಿದೆ. ಇದೊಂದು ಹಿಂದೂ ಸಮಾಜದ ಪರಾಕ್ರಮ . ಕಾಂಗ್ರೆಸ್ ನ ಸಿ.ಎಂ ಇಬ್ರಾಹಿಂ ಅಯೋಧ್ಯೆ ಕಟ್ಟಲು ಇಟ್ಟಿಗೆ ಕೊಡುವ ಭರವಸೆ ನೀಡಿದ್ದರೆ, ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅಯೋಧ್ಯೆಯಲ್ಲಿ ದೇವಸ್ಥಾನ ನಿರ್ಮಾಣ ಆಗಲೇಬೇಕೆಂಬ ಕರೆ ನೀಡಿದ್ದಾರೆ. ಹಿಂದೆಯೂ ಪ್ರಧಾನಿಯಾಗಿದ್ದ ದಿ. ರಾಜೀವ ಗಾಂಧಿ ಫರೀಝಾಬಾದ್ ಕೋರ್ಟಿನ ಮುಖೇನ ಅಯೋಧ್ಯೆಯಲ್ಲಿ ಹಿಂದೂಗಳಿಗೆ ಪೂಜೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ಕಾಂಗ್ರೆಸ್ ನ ಮಾಜಿ ಸಚಿವರು ಬೂಟಾ ಸಿಂಗ್, ಎನ್.ಡಿ ತಿವಾರಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆದಿತ್ತು. ಇಂತಹ ಹಿರಿಯ ಕಾಂಗ್ರೆಸ್ಸಿಗರೇ ಬೆಂಬಲಿಸಿದ್ದರೂ, ಈಗ ಮುಸಲ್ಮಾನರ ಮತಬ್ಯಾಂಕಿಗಾಗಿ ದೇವಸ್ಥಾನ ವಿರೋಧಿಸುತ್ತಿರುವ ಕಾಂಗ್ರೆಸ್ಸಿಗರ ಧೋರಣೆ ಜನತೆಯೇ ಅರ್ಥೈಸಬೇಕಿದೆ ಎಂದರು.

ತಿರುಮಲೇಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಹಿಂ.ಜಾ.ವೇ ವಿಭಾಗ ಪ್ರಧಾನ ಕಾರ್ಯದರ್ಶಿ ರವಿರಾಜ್ ಬಿ.ಸಿ.ರೋಡ್, ಮುಡಿಪು ಧಾರ್ಮಿಕ ಮುಖಂಡ ಕರುಣಾಕರ್ ಶೆಟ್ಟಿ , ಉದ್ಯಮಿ ಅಜಿತ್ ಕುಮಾರ್, ಕುಂಪಲ ಬಾಲಕೃಷ್ಣ ಮಂದಿರದ ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ವೆಂಕಟೇಶ್, ಜಯಂತ್ ಕೊಂಡಾಣ, ಹಿಂ.ಜಾ.ವೇ ಸಂಚಾಲಕ ಪ್ರಕಾಶ್ ಕುಂಪಲ ಮುಖ್ಯ ಅತಿಥಿಗಳಾಗಿದ್ದರು.
ಪ್ರವೀಣ್.ಯಸ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Exit mobile version