Site icon Ullalavani

ಸೋಮೇಶ್ವರ: ಮೃತದೇಹ ಪತ್ತೆ

UN NETWORKS

ಸೋಮೇಶ್ವರ: ಸೋಮೇಶ್ವರ ಉಚ್ಚಿಲ ಸಮುದ್ರತೀರದಲ್ಲಿ ಬುಧವಾರ ಮೃತದೇಹವೊಂದು ಪತ್ತೆಯಾಗಿದ್ದು ಮೃತರನ್ನು ಬಡಗ ಬೆಳ್ಳೂರು ನಿವಾಸಿ ಕೃಷ್ಣಪ್ಪ ಬಂಗೇರ (60) ಎಂದು ಗುರುತಿಸಲಾಗಿದೆ.

ಕೃಷ್ಣಪ್ಪ ಅವರು ಮನೆಯಿಂದ ಮಂಗಳವಾರದಿಂದ ಕಾಣೆಯಾಗಿದ್ದು ಮನೆ ಮಂದಿ ಬಂಟ್ವಾಳ ಠಾಣೆಯಲ್ಲಿ ಬುಧವಾರ ನಾಪತ್ತೆಯಾದ ಕುರಿತು ದೂರು ದಾಖಲಿಸಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.

Exit mobile version