UN NETWORKS
ಮಂಗಳೂರು:ಸುಮಾರು 7 ದಶಕ ಗಳ ತನಕ ದಕ್ಷಿಣ ಕರ್ನಾಟಕದ ಉಳ್ಳಾಲದಲ್ಲಿ ಬಂದು ದೀನೀ ಪ್ರಭೋದನೆಯೊಂದಿಗೆ ರಾಷ್ಟ್ರಾದ್ಯಂತ ಅಹ್ಲು ಸುನ್ನತ್ ವಲ್-ಜಮಾಅತ್ ನೆಲೆಯೂರಲು ಕಾರಣಕರ್ತರಾದ ಆಧ್ಯಾತ್ಮಿಕ ನಾಯಕ ಮರ್ಹೂಂ ಸಯ್ಯದ್ ತಾಜುಲ್ ಉಲಮಾ ಅಬ್ದುರಹ್ಮಾನ್ ಕುಂಞಕೋಯ ತಂಙಳ್ ಅಲ್ ಬುಖಾರಿರವರ 5 ನೇ ಉರೂಸ್ ಡಿಸೆಂಬರ್ 7,8,9 ರಂದು ಎಟ್ಟಿಕುಲಂನಲ್ಲಿ ನಡೆಯಲಿದೆ.
ಉರೂಸ್ ಪ್ರಯುಕ್ತ ಡಿಸೆಂಬರ್ 7 ಶುಕ್ರವಾರ ಬೆಳಿಗ್ಗೆ 7:00 ಗಂಟೆಗೆ ಉಳ್ಳಾಲ ಸಯ್ಯದ್ ಮದನಿ ಝಿಯಾರತ್ ನೊಂದಿಗೆ ಸಂದಲ್ ಜಾಥಾವು ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ,ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ,ಸಯ್ಯದ್ ಖುಬೈಬ್ ತಂಙಳ್ ಉಳ್ಳಾಲ,ಸಿರಾಜುದ್ದೀನ್ ಸಖಾಫಿ ಕನ್ಯಾನರವರ ನೇತೃತ್ವದಲ್ಲಿ ಎಟ್ಟಿಕುಲಂಗೆ ಹೊರಡಲಿದೆ.ಸುನ್ನೀ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಶುಕ್ರವಾರ ಬೆಳಿಗ್ಗೆ 6:30 ಗಂಟೆಗೆ ಉಳ್ಳಾಲ ಸಯ್ಯದ್ ಮದನಿ ದರ್ಗಾ ವಠಾರಕ್ಕೆ ವಾಹನಗಳೊಂದಿಗೆ ಬಂದು ಸಹಕರಿಸುವಂತೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ಹಾಗೂ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಹೇಳಿದರು.
ಸಭೆಯಲ್ಲಿ ಸಯ್ಯದ್ ಆಲವಿ ತಂಙಳ್ ದುವಾ ನೆರವೇರಿಸಿದರು. ಮಹಮ್ಮದ್ ಅಲಿ ಸಖಾಫಿ ಆಶ್‍ಅರಿಯ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಸಯ್ಯದ್ ಕುಬೈಬ್ ತಂಙಳ್, ಇಸ್ಮಾಯಿಲ್ ಮಾಸ್ಟರ್, ಶಾಕಿರ್ ಹಾಜಿ ಮಿತ್ತೂರು, ಅಬ್ದುರಹ್ಮಾನ್ ಮೊಗಪಾನೆ, ಹನೀಫ್ ಹಾಜಿ ಉಳ್ಳಾಲ್, ಮುನೀರ್ ಸಖಾಫಿ ಉಳ್ಳಾಲ್, ಆರೂಕ್ ಹಾಜಿ ಮಲಾಝ್, ಮಹಮ್ಮದ್ ಹಾಜಿ ಕಂಡಿಕ, ಜಮಾಲುದ್ದೀನ್ ಮುಸ್ಲಿಯಾರ್ ಉಳ್ಳಾಲ್, ಹಮೀದ್ ಹಾಜಿ ಬೀಜಕೊಚಿ, ಉಮರ್ ಹಾಜಿ ಸುಳ್ಯ, ಸೌಕತ್ ಹಾಜಿ, ಕುಂಞಬಾವ ಹಾಜಿ, ರಶೀದ್ ಹಾಜಿ , ಜಮಾಲುದ್ದೀನ್ ಸಖಾಫಿ ಇಬ್ರಾಹಿಂ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.