Site icon Ullalavani

ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದ್ದರೆ ಬಿಜೆಪಿಯವರು ಸೂಕ್ತ ದಾಖಲೆ ನೀಡಲಿ: ಸಂತೋಷ್ ಶೆಟ್ಟಿ ಅಸೈಗೋಳಿ ಸವಾಲು

UN NETWORKS

ತೊಕ್ಕೊಟ್ಟು: ಉಳ್ಳಾಲ ಸೋಮೇಶ್ವರದ ಸಾರಸ್ವತ ಕಾಲನಿ, ಓವರ್ ಬ್ರಿಡ್ಜ್ ರಸ್ತೆ ಅಭಿವೃದ್ಧಿಗೆ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ಬಿಡುಗಡೆಗೊಳಿಸಿದ ಮೂರು ಕೋಟಿ ರೂ. ಅನುದಾನವನ್ನು ಮಂಗಳೂರು ಕ್ಷೇತ್ರ ಬಿಜೆಪಿ ಅದು ಕೇಂದ್ರ ಸರಕಾರದ ಅನುದಾನ ಎಂದು ಬಿಂಬಿಸಿ ಪ್ರಧಾನಿ ಮತ್ತು ಸಂಸದರ ಭಾವಚಿತ್ರವುಳ್ಳ ಕಟೌಟ್ ಹಾಕಿದ್ದಾರೆ. ಬಿಜೆಪಿ ಮುಖಂಡರಿಗೆ ಮಾನ, ಮರ್ಯಾದೆ ಇದ್ದಲ್ಲಿ ಅದಕ್ಕೆ ಸರಿಯಾದ ದಾಖಲೆಗಳನ್ನು ನೀಡಲಿ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಪ್ರಶ್ನಿಸಿದ್ದಾರೆ.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ತೊಕ್ಕೊಟ್ಟು ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಂಡಾಣ ಶ್ರೀ ಕ್ಷೇತ್ರ ಸಂಪರ್ಕಿಸುವ ರಸ್ತೆ ನಿರ್ಮಾಣ ಸಂದರ್ಭದಲ್ಲೂ ಯು.ಟಿ.ಖಾದರ್ ಆವರ ಅನುದಾನವನ್ನು ಕೇಂದ್ರ ಸರ್ಕಾರದ ಪ್ರಧಾನ ಮೋದಿ ಅವರ ಅನುದಾನ ಎಂದು ಹೇಳಿಕೆ ನೀಡಿ ಕಾಮಗಾರಿ ನಿಲ್ಲಿಸಿದ ಬಳಿಕವೇ ಬಿಜೆಪಿ ಮುಕಮಡರು ತಪ್ಪು ಒಪ್ಪಿಕೊಂಡಿದ್ದರು. ಈ ರಸ್ತೆ ಕಾಮಗಾರಿ ಸಂದರ್ಭ ವಿದಾನಸಭೆ ಚುನಾವಣೆ ಇತ್ತು. ಈಗ ಲೋಕಸಭಾ ಚುನಾವಣಾ ದೃಷ್ಟಿಯಿಂದ ರಾಜಕೀಯ ಮಾಡಲಾಗುತ್ತಿದೆ. ನಮಗೆ ದೇವರ ಮೇಲೆ ವಿಶ್ವಾಸ ಇದೆ. ಬಿಜೆಪಿ ಮುಖಂಡರು ಮಾಡುತ್ತಿರುವ ಸುಳ್ಳು ಪ್ರಚಾರಕ್ಕೆ ಸೋಮನಾಥ ನೋಡಿಕೊಳ್ಳಲಿ ಎಂದು ಅವರು ದೇವರ ಮೊರೆ ಹೋದರು.

ಹಿಂದೆ ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಚುಕ್ಕಾಣಿ ಐದು ವರ್ಷ ಬಿಜೆಪಿ ಕೈಯಲ್ಲಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಆದರೆ ಯು.ಟಿ. ಖಾದರ್ ಧರ್ಮ, ಜಾತಿ ನೋಡದೆ ಧಾರ್ಮಿಕ ಕೇಂದ್ರಗಳಿಗೆ ಅನುದಾನ ನೀಡಿ ಅಭಿವೃದ್ಧಿಯ ಹರಿಕಾರ ಎನಿಸಿದ್ದಾರೆ ಎಂದು ನುಡಿದರು.ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಉಪಾಧ್ಯಕ್ಷ ಸುರೇಶ್ ಭಟ್ನಗರ, ಕೋಟೆಕಾರು ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಪುರುಷೋತ್ತಮ ಅಂಚನ್, ಸೋಮೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಬಶೀರ್ ಕೊಳಂಗೆರೆ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷ ದಿನೇಶ್ ಕುಂಪಲ, ಮಹಿಳಾ ಘಟಕಾಧ್ಯಕ್ಷೆ ದೇವಕಿ ಪೂಜಾರಿ, ಉಮೇಶ್ ಗಾಂಭೀರ್, ದೀಪಕ್ ಪಿಲಾರ್, ಚಾಂದಿನಿ, ಸತ್ಯವತಿ, ಪವನ್ ರಾಜ್, ವಿನೋದ್ ಕುಂಪಲ, ಸುಂದರ್, ಧನಂಜಯ್, ಅಶ್ರಫ್ ಹಾಗೂ ಕೆ. ವೆಂಕಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.

Exit mobile version