Site icon Ullalavani

ಜನಾರ್ದನ ಪೂಜಾರಿ ಹೇಳಿಕೆ : ಮುಸ್ಲಿಂ ಲೀಗ್ ಖಂಡನೆ

UN NETWORKS

ಉಳ್ಳಾಲ: ಕಾಂಗ್ರೆಸ್ ಹಿರಿಯ ಮುಖಂಡ ಬ.ಜನಾರ್ದನ ಪೂಜಾರಿಯವರು ಅಯೋಧ್ಯೆ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಸಂದರ್ಭದಲ್ಲೇ ವಿವಾದಿತ ಜಮೀನಿನಲ್ಲಿ ರಾಮ ಮಂದಿರ ನಿರ್ಮಾಣ ಶತ ಸಿದ್ಧ ಅನ್ನುವ ಹೇಳಿಕೆ ನೀಡಿರುವುದನ್ನು ದಕ್ಷಿಣ ಕನ್ನಡ ಮುಸ್ಲಿಂ ಲೀಗ್ ತೀವ್ರವಾಗಿ ಖಂಡಿಸಿದೆ.

ದಶಕಗಳಿಂದ ಜಾತ್ಯಾತೀತ ಪ್ರಮುಖ ಪಕ್ಷವನ್ನು ನಿಷ್ಠೆಯಿಂದ ಹಿಂಬಾಲಿಸಿದ ಮತ್ತು ನಿರಂತರ ಮತ ಹಾಕಿದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮಂದಿ ಧಾರ್ಮಿಕ ಭಾವನೆ ಮತ್ತು ನಂಬಿಕೆಗೆ ತೀವ್ರ ಘಾಸಿ ಉಂಟು ಮಾಡಿದೆ. ಒಂದು ಸಮುದಾಯದ ಪರ ಮಾತನಾಡಿ ಇನ್ನೊಂದು ಸಮುದಾಯದ ನಂಬಿಕೆಗೆ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದು ಅವರು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತಕ್ಕೆ ಧಕ್ಕೆ ಉಂಟು ಮಾಡಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶಗಳನ್ನು ಪ್ರತಿಪಾದಿಸುತ್ತಾ ಬಂದಿರುವ ಪೂಜಾರಿ, ರಾಷ್ಟ್ರೀಯ ಪ್ರಾತನಿಧ್ಯಕ್ಕಾಗಿ ಬೆಂಬಲಸಿದ ಮುಸ್ಲಿಂ ಸಮುದಾಯವನ್ನು ಸಾಮಾಜಿಕ ಕಾಲೊನಿಯನ್ನಾಗಿಸಿದ್ದಾರೆ. ಜನಾರ್ದನ ಪೂಜಾರಿ ದ್ವಂದ್ವ ನಿಲುವಿನ ಬಗ್ಗೆ ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರು ತಕ್ಷಣ ತಮ್ಮ ಸ್ಪಷ್ಟೀಕರಣ ನೀಡಬೇಕಿದೆ.

ಕಳೆದ 2014 ರಲ್ಲಿ ದ.ಕ ಜಲ್ಲೆ ಅಲ್ಪಸಂಖ್ಯಾತರು ಸಂಪೂರ್ಣವಾಗಿ ಪೂಜಾರಿಯವರಿಗೆ ಮತ ಸಲ್ಲಿಸಿದ್ದರು. ಜಲ್ಲೆಯಲ್ಲ ಒಂದು ಪ್ರಮುಖ ರಾಜಕೀಯ ಪಕ್ಷದ ಅಸ್ತತ್ವವನ್ನು ಉಳಿಸಲು ಜಿಲ್ಲೆಯ ಮುಸ್ಲಿಮರೇ ಕಾರಣ. ಪ್ರಚಾರಕ್ಕಾಗಿ ಜಾತ್ಯಾತೀತ ಸಿದ್ಧಾಂತವನ್ನು ಬಲಿ ಪಡೆಯುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಮುಸ್ಲಿಂ ಯೂತ್ ಲೀಗ್ ಅಧ್ಯಕ್ಷ ಸಿದ್ಧೀಖ್ ತಲಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version