UN NETWORKS
ಉಳ್ಳಾಲ: ಮನೆಯೊಂದರಲ್ಲಿ ಇಬ್ಬರು ಯುವತಿಯರನ್ನು ಕೂಡಿಟ್ಟು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಯುವಕರನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ಮುನ್ನೂರು ಸಮೀಪ ನಡೆದಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮುನ್ನೂರು ನಿವಾಸಿ ಆರೀಫ್ ಎಂಬಾತನ ಮನೆಯಲ್ಲಿ ರಮೀಝ್, ರಮಾಲ್, ಪರ್ವೇಜ್ ಎಂಬವರು ಸೇರಿಕೊಂಡು ದಂಧೆ ನಡೆಸುತ್ತಿದ್ದರು. ಪಶ್ಚಿಮ ಬಂಗಾಳದ ನಸೀಮಾ ಮತ್ತು ರಿಯಾ ಎಂಬವರನ್ನು ಕೂಡಿಟ್ಟು, ದಂಧೆ ನಡೆಸುತ್ತಿದ್ದವರ ನಾಲ್ವರ ಪೈಕಿ ಸೈಯದ್ ಸಮೀರ್ ಮತ್ತು ರಮೀಝ್ ಎಂಬವರನ್ನು ಬಂಧಿಸಲಾಗಿದೆ. ಉಳಿದವರು ಪರಾರಿಯಾಗಿದ್ದಾರೆ. ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಬಂಧಿತರಿಂದ ಎರಡು ರಿಕ್ಷಾ ಮತ್ತು 24,000 ರೂ. ನಗದು ವಶಪಡಿಸಿಕೊಂಡಿದ್ದಾರೆ.