Site icon Ullalavani

ಸೋಮೇಶ್ವರ ದೇವಸ್ಥಾನದ ರಥಬೀದಿ ಉದ್ಘಾಟನೆ

UN NETWORKS

ಸೋಮೇಶ್ವರ: ಶ್ರೀ ಕ್ಷೇತ್ರ ಸೋಮನಾಥೇಶ್ವರ ದೇವಸ್ಥಾನದ ಮುಖಮಂಟಪ ನಿರ್ಮಾಣಕ್ಕೆ ರಾಜ್ಯದ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ರೂ.1 ಕೋಟಿ ಅನುದಾನ ಬಿಡುಗಡೆಗೊಳಿಸುವ ವಿಶ್ವಾಸವನ್ನು ಜಿಲ್ಲಾ ಉಸ್ತುವಾರಿ ಹಾಗೂ ರಾಜು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ನೀಡಿದರು.

ಅವರು ಉಳ್ಳಾಲ ಸೋಮೇಶ್ವರದ ಶ್ರೀ ಸೋಮನಾಥ ಕ್ಷೇತ್ರದ ರಥಬೀದಿಯನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸರಕಾರದಿಂದ ಶ್ರೀ ಕ್ಷೇತ್ರದ ಸೋಮನಾಥೇಶ್ವರ ದೇವಸ್ಥಾನದ ಎಲ್ಲಾ ರೀತಿಯ ಅಭಿವೃದ್ಧಿಗಳಿಗೆ ಸಹಕರಿಸಲಾಗಿದೆ. ಇನ್ನಷ್ಟು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶ-ವಿದೇಶಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವ ಉದ್ದೇಶ ಹಾಗೂ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ್ ಗಟ್ಟಿ ವಗ್ಗ ವಹಿಸಿದ್ದರು. ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಕೃಷ್ಣ ಗಟ್ಟಿ ಸೋಮೇಶ್ವರ, ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಸುತಗುಂಡಿ, ಭಗವತಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಸೋಮೇಶ್ವರ ಪಂ. ಸದಸ್ಯ ರಾದ ಯೋಗೀಶ್ ಸೊಮೇಶ್ವರ, ದೀಪಕ್ ಪಿಲಾರ್, ಮಾಧವ ಗಟ್ಟಿ, ಆಡಳಿತ ಸಮಿತಿ ಟ್ರಸ್ಟಿಗಳಾದ ರಾಘವ ಆರ್ ಉಚ್ಚಿಲ್, ರುಕ್ಮಯ್ಯ ಬಂಗೇರ, ಯು.ಸೋಮಯ್ಯ, ದೇವಸ್ಥಾನದ ಪ್ರಬಂಧಕ ರಮಾನಾಥ, ದಿನೇಶ್ ಕಾಜವ , ಸೇಸಪ್ಪ ಗಟ್ಟಿ ಕೊಲ್ಯ ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version