ಮಂಜನಾಡಿ: ಮಂಜನಾಡಿ ಗ್ರಾಮ ವ್ಯಾಪ್ತಿಯ ನಿವೇಶನರಹಿತ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಈಗಾಗಲೇ ಕೊಡಲಾಗಿದೆ. ಬಾಕಿ ಉಳಿದಿರುವ ಫಲಾನುಭವಿಗಳಿಗೆ ಈ ಹಿಂದೆ ನೀಡಲಾದ ಭರವಸೆಯಂತೆ ಹಕ್ಕು ಪತ್ರ ವಿತರಣೆ ಆಗುತ್ತಿದೆ. ಎಲ್ಲರಿಗೂ ವಾಸ ಮಾಡಲು ಸ್ವಂತ,ಮನೆ ಜಾಗ ಇರಬೇಕೆಂಬ ಉದ್ದೇಶದಿಂದ ಸರಕಾರ ಕೈಗೊಂಡ ತೀರ್ಮಾನದಂತೆ ಹಕ್ಕು ಪತ್ರ ನೀಡುತ್ತಿದ್ದೇವೆ. ಇದನ್ನು ಯಾವ ಕಾರಣಕ್ಕೂ ದುರಪಯೋಗ ಮಾಡಬಾರದು ಎಂದು ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಅಸೈ ಹೇಳಿದರು.
ಅವರು ಭಾನುವಾರ ಸಂಜೆ ಮಂಜನಾಡಿ ಗ್ರಾಮದ ಬಟ್ಯಡ್ಕದಲ್ಲಿ ನಡೆದ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್‍ನ ದ.ಕ. ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಎನ್‍ಎಸ್ ಕರೀಂ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಅಸೈ ಮಾಜಿ ಅಧ್ಯಕ್ಷ ಇಸ್ಮಾಯಿಲ್ ದೊಡ್ಡ ಮನೆ, ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ಈ ಸಂದರ್ಭ ಕಿನ್ಯ ಗ್ರಾ.ಪಂ. ಮಾಜಿ ಅಧ್ಯಕ್ಷ ಹಮೀದ್ ಕಿನ್ಯ, ಮಂಜನಾಡಿ ಗ್ರಾ.ಪಂ. ಸದಸ್ಯರಾದ ಕುಂಞಬಾವ್ ಕಲ್ಕಟ್ಟ, ಅಶ್ರಫ್ ಕಲ್ಕಟ್ಟ, ಅಬ್ದುಲ್ ಖಾದರ್ ಕಲ್ಕಟ್ಟ, ಯೂತ್ ಕಾಂಗ್ರೆಸ್ ಸದಸ್ಯ ಸಿದ್ದೀಕ್ ಕಲ್ಕಟ್ಟ, ಇಸಾಕ್ ಕಲ್ಕಟ್ಟ ಉಪಸ್ಥಿತರಿದ್ದರು.