Site icon Ullalavani

ದೇರಳಕಟ್ಟೆಯಲ್ಲಿ ಸೀರತ್ ಅಭಿಯಾನ ಕಾರ್ಯಕ್ರಮ

UN NETWORKS

ದೇರಳಕಟ್ಟೆ: ಪ್ರವಾದಿ ಮಹಮ್ಮದ್ ಧಾರ್ಮಿಕ ,ಶೈಕ್ಷಣಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ಕೊಟ್ಟವರು. ಸೌಹಾರ್ದತೆಯ ಮನೋಭಾವ ಅವರಲ್ಲಿತ್ತು. ಶಾಂತಿಯ ಸಂದೇಶವನ್ನೇ ಲೋಕಕ್ಕೆ ಸಾರಿದ್ದಾರೆ. ಸಾರ್ವಕಾಲಿಕ ಚಿಂತಕರಲ್ಲಿ ಅವರೂ ಕೂಡಾ ಒಬ್ಬರಾಗಿದ್ದಾರೆ ಎಂದು ಮಸ್ಜುದುಲ್ ಹುದಾ ತೊಕ್ಕೊಟ್ಟುವಿನ ಖತೀಬ್ ಮುಹಮ್ಮದ್ ಕುಂಞ ಹೇಳಿದರು.

ಪ್ರವಾದಿ ಮಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಎಂಬ ವಿಚಾರಕ್ಕೆ ಸಂಬಂಧಿಸಿ ದೇರಳಕಟ್ಟೆಯಲ್ಲಿ ಶುಕ್ರವಾರ ನಡೆದ ಸೀರತ್ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾನವ ಪರಸ್ಪರ ಹೊಂದಾಣಿಕೆಯಿಂದ ಸೌಹಾರ್ದತೆಯಿಂದ ಬೆಳೆಯಬೇಕು. ವಿಕಲತೆ, ವಿಭಿನ್ನತೆ ಬಿಟ್ಟು ಶಾಂತಿಯ ಬದುಕು ಸಾಗಿಸಬೇಕು ಎಂದು ಹೇಳಿದ್ದರು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲಸ ನಮ್ಮದಾಗಿದೆ ಎಂದರು.

ಬೋಳಂಗಡಿ ಜುಮಾ ಮಸೀದಿ ಖತೀಬ್ ಯಹ್ಯಾ ತಂಙಳ್ ಮದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿ.ಎ. ಫಾರ್ಮಸಿ ಕಾಲೇಜಿನ ಡಾ. ಮುಹಮ್ಮದ್ ಮುಬೀನ್, ಎರ್ನಾಕುಲಂ ಮಸೀದಿ ಖತೀಬ್ ಟಿ.ಇ.ಎಂ ರಾಫಿ ಆಲಿಯ, ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್‍ನ ಅಧ್ಯಕ್ಷ ಸಈದ್ ಇಸ್ಮಾಯಿಲ್, ಬೆಳ್ಮ ಗ್ರಾಮ ಪಂಚಾಯಿತಿ ಸದಸ್ಯ ಅಕ್ಸಾ ಉಸ್ಮಾನ್, ದೇರಳಕಟ್ಟೆ ಪಬ್ಲಿಕ್ ಸ್ಕೂಲ್‍ನ ಅಧ್ಯಕ್ಷ ಅಬೂಬಕರ್ ಹಾಗೂ ಯೂಸುಫ್ ಬಾವ ದೇರಳಕಟ್ಟೆ ಉಪಸ್ಥಿತರಿದ್ದರು.

Exit mobile version