Site icon Ullalavani

ಕಣಚೂರು ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನ-2018

UN NETWORKS

ಉಳ್ಳಾಲ: ಏಡ್ಸ್ ಸಂತ್ರಸ್ತ ಮಕ್ಕಳ ಆರೈಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಮಂಗಳೂರು ಹೃದಯಭಾಗದಲ್ಲಿ ಸರಕಾರದಿಂದ ನಿರ್ಮಿಸಲು ಉದ್ದೇಶಿಸಲಾದ ಸಂತ್ರಸ್ತ ಮಕ್ಕಳ ಆಶ್ರಯತಾಣಕ್ಕಾಗಿ ಕಣಚೂರು ಸಂಸ್ಥೆ ವತಿಯಿಂದ ಸಹಕಾರಿಸಲಾಗುತ್ತಿದೆ ಎಂದು ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಯು. ಕಣಚೂರು ಮೋನು ಅಭಿಪ್ರಾಯಪಟ್ಟರು.

ಅವರು ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಆಸ್ಪತ್ರೆ ಆವರಣದಲ್ಲಿ ಶನಿವಾರ ಜರಗಿದ ವಿಶ್ವ ಏಡ್ಸ್ ದಿನ-2018 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಏಡ್ಸ್ ಸಂತ್ರಸ್ತ ಮಕ್ಕಳ ಆಶ್ರಯಕ್ಕಾಗಿ ರೂ. 45 ಲಕ್ಷ ರೂ ಹಲವರು ಸೇರಿಕೊಂಡು ಸಂಗ್ರಹಿಸಲಾಗಿದೆ. ಕಣಚೂರು ಸಂಸ್ಥೆಯೂ ಇದರಲ್ಲಿ ಕೈ ಜೋಡಿಸಿದೆ. ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶದೊಂದಿಗೆ ದೇಣಿಗೆ ಸಂಗ್ರಹಿಸಲಾಗಿದೆ. ಕಂದಾಯ ಇಲಾಖೆಯಿಂದ ನಗರದ ಹೃದಯಭಾಗದಲ್ಲಿ ಜಾಗ ಕೊಡುವ ವಿಶ್ವಾಸ ಇದೆ. ಶೀಘ್ರವೇ ಸುಸಜ್ಜಿತ ಕಟ್ಟಡ ನಿರ್ಮಾಣದ ಭರವಸೆ ಇದೆ. ಏಡ್ಸ್ ಜಾಗೃತಿ ಕಾರ್ಯಕ್ರಮಗಳಿಂದ ಜನರಲ್ಲಿ ಅರಿವು ಮೂಡಿಸುವುದು ವೈದ್ಯಕೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಕಣಚೂರು ಸಂಸ್ಥೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದರು.

ಕಣಚೂರು ಸಂಸ್ಥೆ ನಿರ್ದೇಶಕ ಅಬ್ದುಲ್ ರಹಿಮಾನ್ ಮಾತನಾಡಿ ಹೆಚ್ ಐವಿ ಪರೀಕ್ಷೆಯ ಎಲ್ಲಾ ವಿಧಾನಗಳು ಆಸ್ಪತ್ರೆಯಲ್ಲಿದೆ. ಈಗಾಗಲೇ ಸ್ಕ್ರೀನಿಂಗ್ ಕೇಂದ್ರದಲ್ಲಿ 4392 ಮಂದಿಯನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 10 ಪುರುಷರು ಮತ್ತು 8 ಮಹಿಳೆಯರಲ್ಲಿ ಹೆಚ್‍ಐವಿ ಪಾಸಿಟಿವ್ ಆಗಿ ಪತ್ತೆಯಾಗಿದೆ. ವಿಶ್ವಸಂಸ್ಥೆಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ದಿನವನ್ನು ಆಚರಿಸಲಾಗುತ್ತಿದೆ. ಕೋಟೆಕಾರು ,ಮುಡಿಪು ಸಾರ್ವಜನಿಕ ಸ್ಥಳಗಳಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಬೀದಿ ನಾಟಕಗಳ ಮೂಲಕ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದ್ದಾರೆ. ವಿದ್ಯಾರ್ಥಿಗಳು ರಚಿಸಿರುವ ಹೆಚ್ ಐವಿ ಕುರಿತ ಜಾಗೃತಿ ವೀಡಿಯೋ ಪರಿಣಾಮಕಾರಿಯಾಗಿದೆ. ಅದನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ಕಣಚೂರು ಸಮುದಾಯ ಆರೋಗ್ಯ ವಿಭಾಗದ ಕರ್ನಲ್ ಕೆ.ಜಿ ಕಿರಣ್, ವೈದ್ಯಕೀಯ ಕಾಲೇಜು ಆಡಳಿತ ನಿರ್ದೇಶಕ ಡಾ. ರೋಹನ್ ಮೋನಿಸ್, ವೈದ್ಯಕೀಯ ಅಧೀಕ್ಷಕ ದೇವಿಪ್ರಸಾದ್ ಶೆಟ್ಟಿ, ಸಹ ಡೀನ್ ಡಾ.ಶ್ರೀಶ ಖಂಡಿಗ, ಕಣಚೂರು ನರ್ಸಿಂಗ್ ಸೈನ್ಸ್ ಪ್ರಾಂಶುಪಾಲೆ ರೆನಿಲ್ಡಾ ಶಾಂತಿ ಲೋಬೊ, ಕಣಚೂರು ಪಿ ಯು ಕಾಲೇಜು ಪ್ರಾಂಶುಪಾಲೆ ಹೇಮಲತಾ ಉಪಸ್ಥಿತರಿದ್ದರು.
ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಡಾ.ಸಬಾ ಮನ್ಸೂರ್ ಸ್ವಾಗತಿಸಿದರು. ಡಾ. ಸತೀಶ್ ಮೋರೆ ವಂದಿಸಿದರು.

ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಹೆಚ್ ಐವಿ ಕುರಿತ ಜಾಗೃತಿ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ನಡೆಯಿತು. ವಿದ್ಯಾರ್ಥಿಗಳು ರಚಿಸಿದ ಕಿರುಚಿತ್ರಗಳಿಗೆ ಪ್ರಶಸ್ತಿಯನ್ನು ಇದೇ ಸಂದರ್ಭ ವಿತರಿಸಲಾಯಿತು.

Exit mobile version