Site icon Ullalavani

ಡಿಸೆಂಬರ್ 2 ಮಲಾರಿಗೆ ರಾಶಿದ್ ಬುಖಾರಿ ಕುಟ್ಯಾಡಿ

UN NETWORKS

ಮಲಾರ್: ಎಸ್ ವೈ ಎಸ್ ಮತ್ತು ಎಸ್ಸೆಸ್ಸೆಫ್ ಮಲಾರ್ ಇದರ ಜಂಟಿ ಆಶ್ರಯದಲ್ಲಿ ಬೃಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ಬುರ್ದಾ ಮಜ್ಲಿಸ್ ಡಿಸೆಂಬರ್ 2 ಆದಿತ್ಯವಾರ ಮಗ್ರಿಬ್ ನಮಝ್ ಬಳಿಕ ಮಲಾರ್ ಪದವು ಮೈದಾನದಲ್ಲಿ ನಡೆಯಲಿದೆ.ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷರಾದ ಶೈಖುನಾ ಅಲಿ ಕುಂಞಿ ಉಸ್ತಾದರು ಸಮಾರಂಭವನ್ನು ಉಧ್ಘಾಟಿಸಲಿದ್ದಾರೆ.

ಸಯ್ಯಿದ್ ಶರಫುದ್ದೀನ್ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ.ಖ್ಯಾತ ಯುವ ವಾಗ್ಮಿ ಮೌಲಾನಾ ರಾಶಿದ್ ಬುಖಾರಿ ಕುಟ್ಯಾಡಿ ಹುಬ್ಬುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ.ಬುರ್ದಾ ಆಲಾಪನೆಯ ನೇತ್ರತ್ವವನ್ನು ಅನ್ವರ್ ಅಲಿ ಸಖಾಫಿ ಶಿರಿಯಾ ವಹಿಸಲಿದ್ದಾರೆ.ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಸಚಿವರೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಸನ್ಮಾನ್ಯ ಯು.ಟಿ ಖಾದರ್ ಮುಖ್ಯ ಅತಿಥಿ ಯಾಗಿ ಆಗಮಿಸಲಿದ್ದಾರೆ.

ಹಾಗೂ ಇನ್ಮಿತರ ಉಲಮಾ ಉಮರಾ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version