Site icon Ullalavani

ತಲಪಾಡಿ: ಶಾರದಾ ವಿದ್ಯಾನಿಕೇತನದ ವಾರ್ಷಿಕ ಕ್ರೀಡಾಕೂಟ

UN NETWORKS

ತಲಪಾಡಿ: ಕ್ರೀಡೆಯು ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ಧಿಕ ಮಟ್ಟವನ್ನು ವಿಸ್ತರಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ಶಾಲೆಯ ಕೀರ್ತಿಯನ್ನು ಬೆಳಗಬೇಕು ಎಂದು ಜೀವವಿಮಾ ವಿಭಾಗದ ಉದ್ಯೋಗಿ ಹಾಗೂ ರಾಷ್ಟ್ರೀಯ ಕ್ರೀಡಾಪಟು ಪಿ. ಚಂದ್ರಶೇಖರ್ ಹೇಳಿದರು.

ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ 2018-19ನೇ ಸಾಲಿನ ಜಂಟಿ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಧ್ವಜಾರೋಹಣ ಗೈದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಡಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ `ಶಾರದಾ’ ಎಂಬ ಹೆಸರು ಸಂಸ್ಕಾರ ಹಾಗೂ ಶ್ರೇಷ್ಠತೆಗೆ ಹೆಸರುವಾಸಿಯಾಗಿದ್ದು, ಶಾರದಾ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಆದರ್ಶಗಳನ್ನು ತಮ್ಮ ವಿದ್ಯಾರ್ಥಿಜೀವನದಲ್ಲಿ ಅಳವಡಿಸಿಕೊಂಡು,ಉತ್ತಮ ನಾಗರೀಕರಾಗಿ ಬೆಳೆದು ಕಲಿಸಿದ ಶಾಲೆಗೆ ಮತ್ತು ದೇಶಕ್ಕೆ ಮಾದರಿಯಾಗಬಲ್ಲ ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿದರು. ಕ್ರೀಡಾಜ್ಯೋತಿ ಮತ್ತು ಕ್ರೀಡಾ ಪ್ರತಿಜ್ಞಾವಿಧಿಯೊಂದಿಗೆ ಕ್ರೀಡೋತ್ಸವ ಉದ್ಘಾಟನೆಗೊಂಡಿತು.

ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದಲ್ಲಿಶಾಲಾ ಪ್ರಾಂಶುಪಾಲೆ ಸುಷ್ಮಾ ದಿನಕರ್, ಡೇ ಬೋರ್ಡಿಂಗ್‍ನ ಪ್ರಾಂಶುಪಾಲೆ ಲತಾಂಜಲಿ ರೈ, ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ.ಜಿ., ಆಡಳಿತಾಧಿಕಾರಿ ವಿವೇಕ್ ತಂತ್ರಿ, ಉಪ ಪ್ರಾಂಶುಪಾಲ ಮೋಹನ್ ದಾಸ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಶಿಕ್ಷಕ-ಶಿಕ್ಷಕೇತರ ಸಿಬಂದಿಗಳು ಉಪಸ್ಥಿತರಿದ್ದರು. ಗಣೇಶ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಅರುಣಾ ಕಣ್ಣನ್ ಕಾರ್ಯಕ್ರಮ ನಿರೂಪಿಸಿದರು. ವಿನೋದ್ ವಂದಿಸಿದರು.

Exit mobile version