Site icon Ullalavani

ಮುಡಿಪು: ಸೂರಜ್ ಕಲಾಸಿರಿ-2018 ಉದ್ಘಾಟನೆ

UN NETWORKS

ಮುಡಿಪು: ವಿಚಾರಗಳಲ್ಲಿ ಕುತೂಹಲ ಇದ್ದಾಗ ಸಾಧನೆ ನಡೆಸಲು ಸಾಧ್ಯ . ಅಂತಹ ಕುತೂಹಲ ಬೆಳೆಸುವ ಕಾರ್ಯ ಸೂರಜ್ ಶಿಕ್ಷಣ ಸಂಸ್ಥೆಯ ಸೂರಜ್ ಕಲಾಸಿರಿ ಕಾರ್ಯಕ್ರಮದಿಂದ ಆಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮುಡಿಪುವಿ ನ ಸೂರಜ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸೂರಜ್ ಕಲಾಸಿರಿ-2018ನ್ನು ಸೂರಜ್ ಪದವಿಪೂರ್ವ ಕಾಲೇಜಿನ ಸಭಾಂಗಣದ ಗುಲಾಬಿ ಶ್ರೀಪಾದ ವೇದಿಕೆಯಲ್ಲಿ ಶುಕ್ರವಾರ ಉದ್ಘಾಟಿಸಿ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸೂರಜ್ ಸೇವಾ ಪ್ರಶಸ್ತಿ ಪ್ರಧಾನಗೈದು ಮಾತನಾಡಿದರು.ಪಾಶ್ಚಾತ್ಯೀಕರಣ ಅನುಕರಿಸುವ ಕಾಲ ಇದಾಗಿದ್ದು ಹಿಂದುಳಿಯುವ ಪ್ರಜ್ಞೆ ನಮ್ಮಲ್ಲಿತ್ತು. ಆದರೆ ಇನ್‍ಫೋಸಿಸ್ ಸಂಸ್ಥೆ, ಸಹಿತ ಸಾಧಕರರಿಂದಾಗಿ ಪ್ರಪಂಚಕ್ಕೆ ಭಾರತ ಸವಾಲು ಹಾಕಿದೆ. ಆ ಮೂಲಕ ಇತರರಿಗೆ ಸರಿ ಸಮಾನರಾಗಿ ತಲೆ ಎತ್ತಿ ನಿಲ್ಲುವ ಕೆಲಸ ಆಗಿದೆ. ಧರ್ಮದಲ್ಲಿ, ನ್ಯಾಯಾಂಗದಲ್ಲಿ ವ್ಯವಹಾರದಲ್ಲಿ ದೇಶ ಹಿಂದುಳಿದಿಲ್ಲ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಭಾರತೀಯತೆಯನ್ನು ಎತ್ತಿ ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯಬೇಕು ಎಂದು ನುಡಿದರು. ಬದುಕಿಗಾಗಿ ವಿದ್ಯೆ ಇರಬೇಕು. ಶಿಕ್ಷಿತರಾದ ಮಾತ್ರಕ್ಕೆ ವೈದ್ಯರು, ಎಂಜಿನಿಯರ್ ಕ್ಷೇತ್ರವನ್ನೇ ಆರಿಸುವುದಲ್ಲ. ಕೃಷಿಯ ಜೊತೆಗೂ ಬದುಕನ್ನು ರೂಪಿಸುವ ಕಾರ್ಯ ನಡೆಯಬೇಕು. ಉನ್ನತ ಶಿಕ್ಷಣ ಪಡೆದವರು ಕೃಷಿ ಕ್ಷೇತ್ರದಲ್ಲಿ ದುಡಿಯುವುದು ಎಲ್ಲರಿಗೂಪ್ರೇರಣೆಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‍ನ ವ್ಯವಸ್ಥಾಪಕ ಆಡಳಿತ ನಿರ್ದೇಶಕ ಎಂ.ಎಸ್. ವಹಾಬಲೇಶ್ವರ ಭಟ್, ಧಾರ್ಮಿಕ ಕ್ಷೇಥ್ರದಲ್ಲಿ ಶ್ರೀಕ್ಷೇತ್ರ ಕಟೀಲಿನ ವಾಸುದೇವ ಆಸ್ರಣ್ಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತ ವೈದ್ಯ ಡಾ. ಅಣ್ಣಯ್ಯ ಕುಲಾಲ್ ಅವರಿಗೆ ಸೂರಜ್ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಡಾ. ಮಂಜುನಾಥ ಎಸ್. ರೇವಣ್ಕರ್ ಹಾಗೂ ಹೇಮಲತಾ ಎಂ. ರೇವಣ್ಕರ್ ರೋಟರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಹಿಂದೆ ಪ್ರದಾನಿಸಲಾದ ರೋಟೇರಿಯನ್ ಪಿಎಚ್‍ಎಫ್‍ನ್ನು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ ಅವರು ಪ್ರದಾನಿಸಿದರು. ಖ್ಯಾತ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

ಮುಡಿಪು ಸಂತ ಜೋಸೆಫ್ ವಾಜ್‍ನ ಧರ್ಮಗುರು ಬೆಂಜಮಿನ್ ಪಿಂಟೊ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಇನ್ ಫೋಸಿಸ್‍ನ ಮಾನವ ಸಂಪನ್ಮೂಲ ಅಧಿಕಾರಿ ವಾಸುದೇವ ಕಾಮತ್, ಹೇಮಲತಾ ಎಂ. ರೇವಣ್ಕರ್, ಸೂರಜ್ ಎಂ. ರೇವಣ್ಕರ್ ಹಾಗೂ ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಸ್ವಾಗತಿಸಿದರು. ನಿತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸೂರಜ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿಮಲಾ ಶೆಟ್ಟಿ ವಂದಿಸಿದರು.

Exit mobile version