UN NETWORKS
ಮಂಗಳೂರು : ಸಂತ ಜೋಸೆಫರ ಶಾಲೆ ಬಜಾಲ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ ಇವರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳಾದ ಆತ್ಮವಿಶ್ವಾಸ, ಶಿಸ್ತು, ಧೈರ್ಯ, ಸಮಯಪ್ರಜ್ಞೆ, ತಾಳ್ಮೆ, ಸಕರಾತ್ಮಕ ಚಿಂತನೆ ಮುಂತಾದ ಗುಣಗಳು ಬೆಳೆಯುತ್ತದೆ. ಈ ಗುಣಗಳನ್ನು ವಿದ್ಯಾರ್ಥಿಗಳು ತನ್ನ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾನಸಿಕ ಒತ್ತಡ, ಜೀವನದಲ್ಲಿ ಜಿಗುಪ್ಸೆ ಇಂತಹ ಮಾರಕ ರೋಗಗಳಿಂದ ಹೊರಬರಲು ಸಾಧ್ಯವೆಂದು ಹೇಳಿದರು.
ಸಂತ ಜೊಸೆಫರ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಅಲ್ವಿನಾ ಸರ್ವರನ್ನು ಸ್ವಾಗತಿಸಿದರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲಿನೆಟ್ ಧನ್ಯವಾದವಿತ್ತರು. ವಿದ್ಯಾರ್ಥಿನಿ ಕೃತಿ ನಿರೂಪಣೆಗೈದರು.