ಸೋಮೇಶ್ವರ: ಪರಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಸೈನ್ಷಿಯಾ- 2K18 ವಿಜ್ಞಾನ ವಸ್ತು ಪ್ರದರ್ಶನ
UllalaVani
UN NETWORKS
ಸೋಮೇಶ್ವರ: ಸೋಮೇಶ್ವರದ ಪರಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಸೈನ್ಷಿಯಾ- 2K18 ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.ಕಾರ್ಯಕ್ರಮವನ್ನು ರಸಾಯನ ಶಾಸ್ತ್ರ ಉಪನ್ಯಾಸಕಿ ಪವನಾ ರವಿ ಪ್ರಕಾಶ್ ಉದ್ಘಾಟಿಸಿದರು.
ಕಾಲೇಜಿನ ವಿಜ್ಞಾನ ವಿಭಾಗದ ಮಕ್ಕಳು ವಿವಿಧ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿದರು. ವಿಜ್ಞಾನಕ್ಕೆ ಸಂಬಂಧ ಪಟ್ಟ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಚಿಣ್ಣರಿಗಾಗಿ ಕಾಲೇಜು ವಿದ್ಯಾರ್ಥಿಗಳು ಮ್ಯಾಜಿಕ್ ಶೋ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಆನಂದಾಶ್ರಮ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಸಾರಸ್ವತ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಎಲ್ ಬೊಂಡಾಲ್, ಮುಖ್ಯ ಕಾರ್ಯನಿರ್ವಹಣಾಧೀಕಾರಿ ಎ.ಎಸ್. ರಾಮಚಂದ್ರರಾವ್ ಹಾಗೂ ಪ್ರಾಂಶುಪಾಲ ವಿಕ್ರಮ ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ವೈಭವ್ ಶೆಟ್ಟಿ ಸ್ವಾಗತಿಸಿದರು. ಚರಿತ್ ರಾಜ್ ಕಾರ್ಯಕ್ರಮ ನಿರೂಪಿಸಿದರು. ನವ್ಯಶ್ರೀ ನಾಯಕ್ ವಂದಿಸಿದರು.