UN NETWORKS
ತಲಪಾಡಿ: ಮಂಗಳೂರಿನಿಂದ ಕಾಸರಗೋಡು ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರು ಮರಳು ಲಾರಿಗಳನ್ನು ತಲಪಾಡಿ ಬಳಿ ರಾತ್ರಿ ಗಸ್ತು ತಿರುತ್ತಿದ್ದ ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಚಾಲಕರು ಪರಾರಿಯಾದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಜಿಲ್ಲೆಯಲ್ಲಿ ಮರಳು ಲಭ್ಯ ಇಲ್ಲದಿರುವುದರಿಂದ ಕೆಲವೇ ಮಂದಿಗೆ ನಿಯಮಾನುಸಾರ ಮರಳು ಸಾಗಾಟಕ್ಕೆ ಪರವಾನಗಿ ನೀಡಲಾಗಿದ್ದು ಕೇರಳಕ್ಕೆ ಮರಳು ಸಾಗಿಸಬಾರದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಹಾಗಿದ್ದರೂ ಅಕ್ರಮ ಸಾಗಾಟ ಮುಂದುವರಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಉಳ್ಳಾಲ ಹಾಗೂ ಕೊಣಾಜೆ ಪೆÇಲೀಸರು ಅಕ್ರಮ ಮರಳು ಸಾಗಾಟಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದು ಅದರಂತೆ ಭಾನುವಾರ ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್ ವಶಪಡಿಸಿಕೊಂಡು, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದು, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.