UN NETWORKS
ಉಳ್ಳಾಲ : ಜಮಾಅತೆ ಇಸ್ಲಾಂ ಹಿಂದ್ ಇದರ ಆಶ್ರಯದಲ್ಲಿ ಧಾರ್ಮಿಕ ಸಹಬಾಳ್ರವ ಮತ್ತು ಸಾಮರಸ್ಯದ ಬಗ್ಗೆ ಕೊಲ್ಯ ಜೋಯ್‍ಲ್ಯಾಂಡ್ ಶಾಲೆಯಲ್ಲಿ ಶಿಕ್ಷಕರ ಜತೆ ವಿಚಾರಗೋಷ್ಠಿ ವಿಶೇಷ ಕಾರ್ಯಕ್ರಮ ನಡೆಯಿತು.
ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಕರೀಂ , ಉಪಾಧ್ಯಕ್ಷ ಅಬ್ದುಲ್ ರಹ್‍ಮಾನ್, ಬೋಳಾರ ಇನ್‍ಪೆಂಟ್ ಜಸಸ್ ಜೋಯ್‍ಲ್ಯಾಂಡ್ ಶಾಲೆಯ ಮುಖ್ಯೋಪಧ್ಯಾಯರಾದ ಸವಿತಾ ಜಲಂಧರ್ ಮೊದಲಾದವರು ಉಪಸ್ಥಿತರಿದ್ದರು. ಕೊಲ್ಯ ಜೋಯ್‍ಲ್ಯಾಂಡ್ ಶಾಲೆಯ ಮುಖ್ಯೊಪಾಧ್ಯಾಯರಾದ ವೀಣ ಭಟ್ ಸ್ವಾಗತಿಸಿದರು. ಇಸಾಕ್ ಹಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.