Site icon Ullalavani

ಪಾನೀರ್ ಇಗರ್ಜಿಯಲ್ಲಿ ಹಸಿರು ಭಾನುವಾರ ಆಚರಣೆ

UN NETWORKS

ದೇರಳಕಟ್ಟೆ : ದೇರಳಕಟ್ಟೆ ಪಾನೀರ್ ದಯಾಮಾತೆ ಇಗರ್ಜಿಯಲ್ಲಿ ಪ್ರಕೃತಿ ಉಳಿವಿಗಾಗಿ ಹಸಿರು ಭಾನುವಾರ ಕಾರ್ಯಕ್ರಮ ಇಗರ್ಜಿಯ ಆವರಣದಲ್ಲಿ ಆಚರಿಸಲಾಯಿತು.

ಮಂಗಳೂರು ಪ್ರಾಂತ್ಯ ಧರ್ಮಾಧ್ಯಕ್ಷರಾದ ರೆ.ಫಾ.ಪೀಟರ್ ಪೌಲ್‌ ಸಲ್ದಾನ ಅವರ ಆದೇಶದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದ ಪ್ರಯುಕ್ತ ಇಗರ್ಜಿಯ ಆವರಣದಲ್ಲಿ ಗಿಡಗಳನ್ನು ನೀಡಲಾಯಿತು. ಈ ಸಂದರ್ಭ ನಡೆದ ಬಲಿಪೂಜೆಯನ್ನು ಫಾ.ಮ್ಯಾಕ್ಸಿಂ ರೊಜಾರಿಯೋ ನೆರವೇರಿಸಿ, ಪ್ರಕೃತಿ ರಕ್ಷಣೆ ನಮ್ಮ ಹೊಣೆಯಾಗಿದ್ದು ನಮ್ಮ ಮನೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ರಕ್ಷಿಸಬಹುದು ಎಂದು ಹೇಳಿದರು.

ಚರ್ಚ್ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್, ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೋನ್ಸಾಲ್ವಿಸ್ ಇನ್ನಿತರರು ಉಪಸ್ಥಿತರಿದ್ದರು.

Exit mobile version