Site icon Ullalavani

ಪಜೀರು: ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯ ಕುಲಸಚಿವ ಡಾ. ಎ. ಎಂ. ಖಾನ್‍ಗೆ ಸನ್ಮಾನ

UN NETWORKS

ಪಜೀರು : ಈದ್ ಮಿಲಾದ್ ಪ್ರಯುಕ್ತ ಪಜೀರು ರಹ್‍ಮಾನಿಯ ಜುಮಾ ಮಸೀದಿ ಮತ್ತು ಜಮಿಯತ್ತುತುಲ್ ಫ್ರೆಂಡ್ಸ್ ಎಸೋಸಿಯೇಶನ್‍ನ ಸಂಯುಕ್ತ ಆಶ್ರಯದಲ್ಲಿ ಮೀಲಾದುನ್ನಬಿ ಮತ್ತು ಮದ್ರಸ ಮಕ್ಕಳ ಮೀಲಾದ್ ಫೆಸ್ಟ್ ಕಾರ್ಯಕ್ರಮ ಮಸೀದಿಯ ವಠಾರದಲ್ಲಿ ಮಂಗಳವಾರ ನಡೆಯಿತು.

ಪಜೀರು ರಹ್‍ಮಾನಿಯ ಜುಮಾ ಮಸೀದಿ ಖತೀಬ್ ಮೌಲಾನ ಇಬ್ರಾಹಿಂ ದಾರಿಮಿ ದುವಾ ನೆರ ನೆರವೇರಿಸಿ ಮೀಲಾದುನ್ನಬಿ ಕಾರ್ಯಕ್ರಮ ಉದ್ಘಾಟಿಸಿ ಪ್ರವಾದಿಯವರ ಆದರ್ಶ ಬದುಕಿನ ಬಗ್ಗೆ ಸಂದೇಶ ನೀಡಿದರು. ಮಂಗಳೂರು ವಿವಿ ಕುಲಸಚಿವ ಡಾ. ಎಂ. ಎಂ. ಖಾನ್ ಅವರನ್ನು ಸನ್ಮಾನಿಸಲಾಯಿತು.ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಪ್ರವಾದಿಯವರ ಹುಟ್ಟುಹಬ್ಬ ಆಚರಣೆ ಮಾತ್ರ ಮಾಡುವುದಲ್ಲ. ಅವರ ಸುನ್ನತ್‍ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಸಮುದಾಯದ ಅಭಿವೃದ್ಧಿಗೂ ಸೇವೆ ಮಾಡಬೇಕು ಎಂದು ಕರೆ ನೀಡಿದರು.

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಉಮರ್ ಪಜೀರು ಮಾತನಾಡಿ, ಮಕ್ಕಳು ತನ್ನ ಪ್ರತಿಭೆಯನ್ನು ಪೋಷಕರ ಎದುರು ಅನಾವರಣ ಮಾಡುವ ಈ ದಿನದ ವಿಶೇಷ ಕಾರ್ಯಕ್ರಮ. ಇಂತಹ ದಿನಗಳಲ್ಲಿ ಸಮಾಜಮುಖಿ ಕೆಲಸ ಆಗಲಿ ಎಂದು ಆಶಿಸಿದರು.
ರಹ್‍ಮಾನಿಯ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಜಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮೀಲಾದುನ್ನಬಿ ಸಂದೇಶ ನೀಡಿದರು.

ಇಬ್ರಾಹಿಂ ಹಾಜಿ, ಅಬ್ದುಲ್ ಖಾದರ್ ಜೆ, ಪಿ. ಅಬ್ದುಲ್ ಖಾದರ್, ಪಿ. ಮಹಮ್ಮದ್, ಅಬೂಬಕರ್ ಪಾಡಿ, ಅಬೂಬಕರ್ ಸಿಗ್ಮಾ, ರಫೀಕ್ ಪಜೀರು, ಮೌಲಾನ ಇಸ್ಮಾಯಿಲ್ ಮದನಿ, ಅಬ್ದುಲ್ ಖಾದರ್ ಮದನಿ, ಅಬ್ದುಲ್ ಖಾದರ್ ದಾರಿಮಿ, ಸಿಎಚ್. ಲತೀಫ್, ಸಿ.ಎಚ್. ಮೊಯ್ದಿನ್, ಅಶ್ರಫ್ ಹಾಗೂ ಇಬ್ರಾಹಿಂ ಕಾಪಿಕಾಡ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Exit mobile version