Site icon Ullalavani

ನಡುಪದವು: ಪಿ.ಎ. ಕಾಲೇಜ್ ಆಫ್ ಫಾರ್ಮಸಿಯಲ್ಲಿ ರಾಷ್ಟ್ರೀಯ ಫಾರ್ಮಸಿ ಸಪ್ತಾಹಕ್ಕೆ ಚಾಲನೆ

UN NETWORKS

ಉಳ್ಳಾಲ: ಔಷಧ ವಿಜ್ಞಾನ ಕ್ಷೇತ್ರದ ವೃತ್ತಿಯಲ್ಲಿರುವ ಔಷಧ ತಜ್ಞರು ಔಷಧ ಸಂಶೋಧನೆ ಮಾಡಿ ನಿಖರ ಔಷಧ ವಿತರಿಸುವ ಇವರು ವೈದ್ಯ ಮತ್ತು ರೋಗಿಯ ಮಧ್ಯೆ ಕೊಂಡಿಯಾಗಿ ಕರ್ತವ್ಯ ಮಾಡುತ್ತಿದ್ದಾರೆ ಎಂದು ನಡುಪದವಿನ ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್ ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್ ಹೇಳಿದರು.

ಪಿ.ಎ. ಕಾಲೇಜ್ ಆಫ್ ಫಾರ್ಮಸಿಯಲ್ಲಿ ಜರುಗಿದ ರಾಷ್ಟ್ರೀಯ ಫಾರ್ಮಸಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಔಷಧ ತಜ್ಞ ಆಗಿ ತಮ್ಮ ಸೇವೆ ಮತ್ತು ಕರ್ತವ್ಯದ ಬಗ್ಗೆ ಹೆಮ್ಮೆ ಪಡಬೇಕು ಹಾಗೂ ಔಷಧ ತಜ್ಞರ ಸೇವೆ ಅತ್ಯಮೂಲ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಿ.ಎ. ಸೆಂಟರ್ ಫಾರ್ ಮ್ಯಾನೇಜ್‍ಮೆಂಟ್ ಸ್ಟಡೀಸ್‍ನ ಪ್ರಾಂಶುಪಾಲೆ ಡಾ. ಲತಾಕೃಷ್ಣನ್ ಮಾತನಾಡಿ ‘ಔಷಧ ತಜ್ಞರ ಕರ್ತವ್ಯಗಳು ಮೌಲ್ಯಯುತವಾದ ಸೇವೆಗಳ’ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.ವಿಶೇಷ ಉಪನ್ಯಾಸ ನೀಡಿದ ಮಂಗಳೂರಿನ ಎ.ಜೆ. ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಫಾರ್ಮಕೋವಿಜಿಲನ್ಸ್ ಆಫ್ ಇಂಡಿಯಾದ ಸಂಯೋಜಕ ಡಾ. ಶರತ್, ಔಷಧ ವಿಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆಗಳು, ರೋಗಿಗಳು ಅನುಸರಿಸಬೇಕಾದ ಕ್ರಮಗಳು, ಔಷಧಗಳ ಸಮರ್ಪಕ ಬಳಕೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಔಷಧ ತಜ್ಞರ ಪಾತ್ರದ ಬಗ್ಗೆ ವಿವರಿಸಿದರು.

ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಸ್ವಾಗತಿಸಿ ಸಪ್ತಾಹದ ಉದ್ದೇಶವನ್ನು ತಿಳಿಸಿದರು. ಪ್ರೊ. ವಿಜೇತಾ ಪೂಜಾರಿ ಕರ್ಯಕ್ರಮ ನಿರೂಪಿಸಿದರು. ಪ್ರೊ. ನಿಶ್ಮಿತಾ ವಂದಿಸಿದರು.

Exit mobile version