Site icon Ullalavani

ಕಣಚೂರು ಆಸ್ಪತ್ರೆ ಜನರ ಸೇವೆಗೆ ಸಜ್ಜು

ಉಳ್ಳಾಲ್ ನ್ಯೂಸ್ ಡೆಸ್ಕ್

ಉಳ್ಳಾಲ: ಗ್ರಾಮೀಣ ಭಾಗದ ಜನರ ಸೇವೆಗೆ ಸಜ್ಜಾಗಿರುವ ಕಣಚೂರು ಸಂಸ್ಥೆ ಎಲ್ಲಾ ರೀತಿಯ ಆರೋಗ್ಯ ಬಗೆಗಿನ ಮಾಹಿತಿ ನೀಡಲು ಆರಂಭಿಸಿದೆ ಎಂದು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡೀನ್ ಪ್ರೊ. ಡಾ. ಖಾಜಾ ನಾಸಿರುದ್ಧೀನ್ ಹೇಳಿದರು.
ಅವರು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಇಲ್ಲಿ ಸೋಮವಾರ ನಡೆದ ಆತಂಕ ಮತ್ತು ಖಿನ್ನತೆ ಅರಿವು ಸಪ್ತಾಹ ಇದರ ಪ್ರಯುಕ್ತ ಉಚಿತ ಮನೋರೋಗ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ವೈದ್ಯಕೀಯ ಸೇವೆಯಲ್ಲಿ ತೊಡಗಿರುವ ಕಣಚೂರು ಆಸ್ಪತ್ರೆ ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆರೋಗ್ಯ ಮಾಹಿತಿ ಉಚಿತ ಶಿಬಿರಗಳನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಣಚೂರು ಇನ್‌ಸ್ಟಿಟ್ಯೂಷನ್ ಆಫ್ ಮೆಡಿಕಲ್ ಸೈನ್ಸ್‌ನ ಅಧ್ಯಕ್ಷ ಕಣಚೂರು ಮೋನು ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಕಣಚೂರು ಸಂಸ್ಥೆ ಅಗ್ರಗಣ್ಯ ಸ್ಥಾನ ಪಡೆಯಲು ಸರ್ವತೃ ಪ್ರಯತ್ನ ಎಲ್ಲಾ ಸಿಬ್ಬಂದಿ ವರ್ಗದಿಂದ ನಡೆಯುತ್ತಿದೆ ಎಂದರು.
ವೈದ್ಯಕೀಯ ಸುಪರಿಟೆಂಡೆಂಟ್ ಡಾ. ದೇವಿ ಪ್ರಸಾದ್, ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು. ಕಣಚೂರು ಆಸ್ಪತ್ರೆ ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಪ್ರದ್ಯುಮ್ನ್ ಮನೋರೋಗದ ಕುರಿತು ಮಾಹಿತಿ ನೀಡಿದರು.
ಡಾ.ಗೋಪಾಲ ಆಚಾರ್‍ಯ ಸ್ವಾಗತಿಸಿದರು. ದೀಪಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ರಮೇಶ್ ವಂದಿಸಿದರು.

Exit mobile version