Site icon Ullalavani

ೋಟೆಕಾರು: ಉಳ್ಳಾಲ ವಲಯ ಬಂಟರ ಕ್ರೀಡಾಕೂಟ ‘ಗೊಬ್ಬುದ ಪಂಥ’

 

ಉಳ್ಳಾಲ್ ನ್ಯೂಸ್ ಡೆಸ್ಕ್

ಬಂಟರ ಸಂಘ ಉಳ್ಳಾಲ ವಲಯ ವತಿಯಿಂದ ಉಳ್ಳಾಲ ವಲಯ ಮಟ್ಟದ ಕ್ರೀಡಾಕೂಟ ‘ಗೊಬ್ಬುದ ಪಂಥ’ ಸೋಮೇಶ್ವರ ಆನಂದಾಶ್ರಮ ಪ್ರೌಢ ಶಾಲಾಮೈದಾನದಲ್ಲಿ ನಡೆಯಿತು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಸಮಾಜ ಸದೃಢವಾಗಬೇಕಾದರೆ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತಲು ಸರ್ವರೂ ಸಹಕರಿಸಬೇಕು ಎಂದರು.

ಸಮಾಜದಲ್ಲಿ ಬಹಳಷ್ಟು ಹಿಂದುಳಿದ ಯುವತಿಯರಿದ್ದು ಅವರಿಗೆ ಕಲ್ಯಾಣ ಭಾಗ್ಯಕ್ಕೆ,  ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿರುವ, ವಂಚಿತರಾದ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡುವುದರ ಮೂಲಕ ಬಾಳನಲ್ಲಿ ಬೆಳಕಾಗಬೇಕು ಎಂದು ನುಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ  ಪೂನಾ ಉದ್ಯಮಿ ಪದ್ಮನಾಭ ಶೆಟ್ಟಿ, ಉದ್ಯಮಿ ಶ್ರೀನಾಥ ಕೊಂಡೆ, ತಲಪಾಡಿ ಶಾರದಾ ವಿದ್ಯಾನಿಕೇತನದ ಉಪ ಪ್ರಾಂಶುಪಾಲೆ ಲತಾ ಎಸ್.ರೈ, ಮಂಗಳೂರು ಯೆನೆಪೋಯ ಕಾಲೇಜಿನ ಉಪನ್ಯಾಸಕಿ ಸುರೇಖಾ ಪ್ರಭಾಕರ ಅಡಪ, ಮಾಜಿ ಅಧ್ಯಕ್ಷ ಕೆ. ಚಂದ್ರಹಾಸ ಅಡ್ಯಂತಾಯ, ಸಂಘಟನಾ ಕಾರ್ಯದರ್ಶಿ ಮೋಹನ್‌ದಾಸ್ ಶೆಟ್ಟಿ ನೆತ್ತಿಲ, ಕೋಶಾಽಕಾರಿ ಮೋಹನ್‌ದಾಸ್ ಗಾಂಭೀರ, ಉಪಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ  ಹಾಗೂ ಸರೋಜಿನಿ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಬಂಟರ ಸಂಘ ಉಳ್ಳಾಲ ವಲಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ಮೇಲಂಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಆನಂದ ಶೆಟ್ಟಿ ವಂದಿಸಿದರು.

ಸ್ಪರ್ಧೆಯಲ್ಲಿ ಸುಮಾರು ೬೦೦ಮಂದಿ ಭಾಗವಹಿಸಿದ್ದು, ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ, ಮಹಿಳೆಯರಿಗಾಗಿ ತ್ರೋಬಾಲ್, ಹಗ್ಗಜಗ್ಗಾಟ, ರಿಲೇ, ಗೋಣಿಚೀಲ ಓಟ, ಕಪ್ಪೆಜಿಗಿತ ವಿವಿಧ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.

ಸಮಾರೋಪದಲ್ಲಿ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಅಧ್ಯಕ್ಷ ಡಾ. ಜಯಪಾಲ್ ಶೆಟ್ಟಿ ತಲಪಾಡಿ ದೊಡ್ಡಮನೆ, ರಘುರಾಮ ಕಾಜವ, ಉದ್ಯಮಿ ಶ್ರೀನಾಥ ಕೊಂಡೆ, ಶ್ರೀ ಕ್ಷೇತ್ರ ಅಲಂಕಾರಗುಡ್ಡೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ತಲಪಾಡಿ ದೊಡ್ಡಮನೆ, ಉದ್ಯಮಿ ಗಿರೀಶ್ ಆಳ್ವ ಮೋರ್ಲ, ಗೋಪಾಲ ಶೆಟ್ಟಿ ಅರಿಬೈಲು ವಿಜೇತರಿಗೆ ಬಹುಮಾನ ವಿತರಿಸಿದರು.

Exit mobile version