Site icon Ullalavani

ಮೊಂಟೆಪದವು: ಕೋಮು ಸೌಹಾರ್ದಕ್ಕೆ ಸಾಕ್ಷಿಯಾದ ಮೀಲಾದುನ್ನಬಿ ಆಚರಣೆ

UN NETWORKS

ಉಳ್ಳಾಲ: ಮೊಂಟೆಪದವಿನಲ್ಲಿ ಮೀಲಾದುನ್ನಬಿ ಜಾಥಾದಲ್ಲಿ ಸಾಗಿದವರಿಗೆ ಇಲ್ಲಿನ ಶ್ರೀ ಶಾರದಾಂಭ ಭಜನಾ ಮಂದಿರದ ಸದಸ್ಯರು ಸಿಹಿತಿಂಡಿ, ಪಾನೀಯವನ್ನು ನೀಡಿ ಕೋಮು ಸೌಹಾರ್ದ ಮೆರೆದರು.

ಕಳೆದ ಹಲವು ವರ್ಷಗಳಿಂದ ಇಲ್ಲಿ ನಡೆಯುವ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ನಡೆಯುವ ರ್ಯಾಲಿಗೆ ಮುಸ್ಲಿಮರು ಸಿಹಿತಿಂಡಿ ಪಾನೀಯ ನೀಡಿದರೆ, ಮೀಲಾದುನ್ನಬಿ ಸಂದರ್ಭ ಹಿಂದೂ ಸಹೋದರರು ಒಟ್ಟಾಗಿ ಸಿಹಿತಿಂಡಿಯನ್ನು ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಮಂಗಳವಾರ ಮೀಲಾದ್ ರ್ಯಾಲಿಯಲ್ಲಿ ಸಾಗಿ ಬಂದ ಮುಸ್ಲಿಮರನ್ನು ಶಾರದಾ ಭಜನಾ ಮಂದಿರದ ಸದಸ್ಯರು ಸ್ವಾಗತಿಸಿ ಪಾನೀಯ, ಸಿಹಿತಿಂಡಿ ವಿತರಿಸಿದರು.

Exit mobile version