Site icon Ullalavani

ಪ್ರವಾದಿ ಸಂದೇಶ ವ್ಯಕ್ತಿತ್ವದಲ್ಲಿ ರೂಪಿಸಿಕೊಳ್ಳಿ: ಸಚಿವ ಖಾದರ್

UN NETWORKS

ಉಳ್ಳಾಲ: ಸಹನೆ, ಪ್ರೀತಿ, ವಿಶ್ವಾಸ, ಸಹೋದರತೆಯನ್ನು ಬೋಧಿಸಿದ ಪ್ರವಾದಿಯವರ ಸಂದೇಶವನ್ನು ಎಲ್ಲರೂ ವ್ಯಕ್ತಿತ್ವದಲ್ಲಿ ರೂಪಿಸಿಕೊಳ್ಳುವ ಮೂಲಕ ಎಲ್ಲರಿಗೂ ಆದರ್ಶರಾಗಿ ಬಾಳಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಅವರು ಈದ್ ಮಿಲಾದ್ ಪ್ರಯುಕ್ತ ಉಳ್ಳಾಲದ ಕೋಟೆಪುರ ಜುಮಾ ಮಸೀದಿಯಿಂದ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ವಠಾರದವರೆಗೆ ಮಂಗಳವಾರ ಜರಗಿದ ಬೃಹತ್ ಸ್ವಲಾತ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದ ಜನತೆಗೆ ಮುಖ್ಯಮಂತ್ರಿಗಳ ಪರವಾಗಿ ಈದ್ ಹಬ್ಬದ ಶುಭಾಷಯಗಳನ್ನು ಕೋರಿದ ಸಚಿವರು, ಶಾಂತಿಗೆ, ಸೌಹಾರ್ದತೆ ಈದ್ ಹಬ್ಬದ ಸಂದೇಶವಾಗಿದೆ. ಅದನ್ನು ಪ್ರತಿಪಾದಿಸುವ ಮೂಲಕ ಸಮಾಜಕ್ಕೆ ಪೂರಕವಾಗಿ ಎಲ್ಲರೂ ಬಾಳುವಂತಹ ಕಾರ್ಯ ಆಗಬೇಕಿದೆ ಎಂದರು.ಮೆರವಣಿಗೆ ನಂತರ ದರ್ಗಾ ವಠಾರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಮುಸಲ್ಮಾನರ ಸಂಖ್ಯೆ ಹೆಚ್ಚಳವಾಗುತ್ತಿದೆ, ಇಂದು ಪ್ರವಾದಿಯವರ ಹೆಸರಿನಲ್ಲಿ ಹಲವು ಕಾರ್ಯಕ್ರಮ ನಡೆಸಲಾಗುತ್ತಿದ್ದು, ಸ್ಥಳೀಯ ಪ್ರದೇಶದಲ್ಲಿ ಸೌಹಾರ್ದ, ಶಾಂತಿಯ ವಾತಾವರಣ ನಿರ್ಮಿಸಿದಾಗ ಪರಿಪೂರ್ಣ ಜೀವನ ಸಾಧ್ಯ. ಪ್ರವಾದಿ ಸಂದೇಶ ಪಾಲಿಸಿದಂತಾಗುತ್ತದೆ. ಸ್ವಚ್ಚತೆಗೆ ಇಸ್ಲಾಮ್ ಆದ್ಯತೆ ನೀಡಿದೆ, ಪ್ರವಾದಿಯವರ ಪ್ರೀತಿಯಿಂದ ಬಿಸಿಲನ್ನೂ ಲೆಕ್ಕಿಸದೇ ದೂರದ ಊರಿನಿಂದ ಸ್ವಲಾತ್ ಮೆರವಣಿಗೆ ನಡೆಸಲಾಗುತ್ತದೆ. ಈ ಸಂದರ್ಭದಲಿ ್ಲದಾಹ ತೀರಿಸಲು ಬಳಸಿದ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಚತೆ ಕಾಪಾಡಬೇಕು ಎಂದರು.

ಉಳ್ಳಾಲ ಜುಮಾ ಮಸೀದಿ ಖತೀಬ ಅಬ್ದುಲ್ ಅಝೀಝ್ ಬಾಖವಿ ದುಆ ಗೈದರು, ಅರೆಬಿಕ್ ಕಾಲೇಜಿನ ಇಬ್ರಾಹಿಂ ಮದನಿ, ಉಸ್ಮಾನ್ ಪೈಝಿ, ದಅವಾ ಕಾಲೇಜಿನ ಇಬ್ರಾಹಿಂ ಅಹ್ಸನಿ, ಪ್ರಧಾನ ಕಾರ್ಯದರ್ಶಿ ತ್ವಾಹ ಮುಹಮ್ಮದ್, ಉಪಾಧ್ಯಕ್ಷ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಅಡಿಟರ್ ಯು.ಟಿ ಇಲ್ಯಾಸ್, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಜತೆ ಕಾರ್ಯದರ್ಶಿ ಆಝಾದ್ ಇಸ್ಮಾಯೀಲ್, ಸಯ್ಯಿದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್,ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಉಪಾಧ್ಯಕ್ಷರಾದ ಮುಹಮ್ಮದ್ ಹಳೆಕೋಟೆ ಮತ್ತಿತರರು ಉಪಸ್ಥಿತರಿದ್ದರು.

ಸಯ್ಯಿದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ, ದ್ವಜಾರೋಹಣ ಮೂಲಕ ಕೋಟೆಪುರ ಜುಮಾ ಮಸೀದಿಯಿಂದ ಆರಂಭಗೊಂಡ ಬ್ರಹತ್ ಸ್ವಲಾತ್ ಮೆರವಣಿಗೆ ಅಬ್ಬಕ್ಕ ವೃತ್ತ, ಮುಕ್ಕಚ್ಚೇರಿ, ಆಝಾದ್‍ನಗರ, ಮಾಸ್ತಿಕಟ್ಟೆ ಮಾರ್ಗವಾಗಿ ದರ್ಗಾ ವಠಾರದಲ್ಲಿ ಸಮಾಪನಗೊಂಡಿತು. ಈ ಸಂದರ್ಭದಲ್ಲಿ ದರ್ಗಾ ಸಮಿತಿ ವತಿಯಿಂದ 2019ರ ಕ್ಯಾಲೆಂಡರ್ ಉದ್ಘಾಟನೆ ನಡೆಯಿತು.

Exit mobile version