Site icon Ullalavani

ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಝರ್ ಷಾ ಪಟ್ಟೋರಿ ಆಯ್ಕೆ

UN NETWORKS

ಕೊಣಾಜೆ: ಮಂಗಳೂರು ವಿಧಾನ ಸಭಾ ಕ್ಷೇತ್ರದ ಕೊಣಾಜೆ ಗ್ರಾಮ ಪಂಚಾಯಿತಿಯ ಎರಡನೆ ಅವಧಿಯ ಅಧ್ಯಕ್ಷರಾಗಿ ನಝರ್ ಷಾ ಪಟ್ಟೋರಿ ಅಧಿಕಾರದ ಗದ್ದುಗೆ ಏರಿದರು.ಕೊಣಾಜೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸತತ ಮೂರು ಬಾರಿ ವಿವಿಧ ವಾರ್ಡ್‍ಗಳಿಂದ ಆಯ್ಕೆಯಾಗಿರುವ ಹೆಗ್ಗಳಿಕೆ ಇರುವ ನಝರ್ ಷಾ ಪಟ್ಟೋರಿ ಅವರು 29ಸದಸ್ಯ ಬಲದ ಕೊಣಾಜೆ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 18 ಹಾಗೂ ಬಿಜೆಪಿ ಬೆಂಬಲಿತ 11 ಸದಸ್ಯರ ಪೈಕಿ ಕಾಂಗ್ರೆಸ್ ಬೆಂಬಲಿತ ಎಲ್ಲ 18ಸದಸ್ಯರ ಮತಗಳನ್ನು ಪಡೆದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ರಾಮಚಂದ್ರ ಗಟ್ಟಿ ಅವರು 11ಮತಗಳನ್ನು ಪಡೆದು ತೃಪ್ತರಾದರು.

ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ 18ಸದಸ್ಯರು ಆಯ್ಕೆಯಾದಾಗಲೇ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಸದಸ್ಯರು ಆಕಾಂಕ್ಷಿಗಳಾಗಿದ್ದರೂ ನಝರ್ ಷಾ ಹಾಗೂ ಶೌಕತ್ ಅಲಿ ನಡುವೆ ಸ್ಪರ್ಧೆ ಇದ್ದುದರಿಂದ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಡುವೆ ನಡೆದ ಮಾತುಕತೆಯಂತೆ ಎರಡೂವರೆ ವರ್ಷ ಅವಧಿಯ ಅಧಿಕಾರ ಹಂಚುವ ಒಪ್ಪಂದ ಏರ್ಪಟ್ಟಿತ್ತು. ಅದರಂತೆ ಶೌಕತ್ ಅಲಿ ಅವರು ಮೊದಲ ಅವಧಿಗೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದು ಚುನಾವಣೆಯ ಕಾರಣದಿಂದ ಕೆಲವು ತಿಂಗಳು ಮುಂದೆ ಸಾಗಿದರೂ ಇದೀಗ ಅವರು ಅಧಿಕಾರ ಬಿಟ್ಟುಕೊಟ್ಟಿದ್ದು ಅಧ್ಯಕ್ಷ ಸ್ಥಾನಕ್ಕಾಗಿ ಶನಿವಾರ ನಡೆದ ಚುನಾವಣೆಯಲ್ಲಿ ನಝರ್ ಷಾ ಅಧ್ಯಕ್ಷರಾಗಿ ಆಯ್ಕೆಯಾದರು.

ಕೊಣಾಜೆ ಗ್ರಾಮ ಸಮಿತಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಯುವ ಕಾಂಗ್ರೆಸ್ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ನಝರ್ ಗ್ರಾಮ ಚಲೋ ಕಾರ್ಯಕ್ರಮದ ಮೂಲಕ ಮಂಗಳೂರು ಕ್ಷೇತ್ರವನ್ನು ರಾಜ್ಯದ ನಂ. 1 ಯುವ ಕಾಂಗ್ರೆಸ್ ಕ್ಷೇತ್ರವಾಗಿ ಮಾಡುವ ಮೂಲಕ ಉತ್ತಮ ಹೆಸರು ಸಂಪಾದಿಸಿದ್ದರು

Exit mobile version