UN NETWORKS
ಉಳ್ಳಾಲ: ಮಾರುಕಟ್ಟೆಗಳು ಗ್ರಾಹಕರ ಕೇಂದ್ರಗಳಾಗಿ ಬೆಳೆಯಬೇಕು. ಬಸ್ಸು ನಿಲ್ದಾಣ ಸ್ಥಾಪನೆಯ ಜೊತೆಗೆ ಪ್ರದೇಶವನ್ನು ಜನಸೇವಾ ಮಾರುಕಟ್ಟೆ ಕೇಂದ್ರಗಳಾಗಿ ಪರಿವರ್ತಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.ಅವರು ಕೋಟೆಕಾರು ಪಟ್ಟಣ ಪಂಚಾಯಿತಿಯ ಅನುದಾನದನದಡಿ ದೇರಳಕಟ್ಟೆ ಜಲಾಲ್‍ಬಾಗ್‍ನಲ್ಲಿ ನಿರ್ಮಿಸಲಾದ ಬಸ್ಸು-ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು.
ಬ್ಲಾಕ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ಜಿ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ, ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಆಲ್ವಿನ್ ಡಿಸೋಜ, ಕೋಟೆಕಾರು ಪ.ಪಂ ಸದಸ್ಯ ಡಿ.ಎಂ.ಮಹಮ್ಮದ್, ಜಲಾಲ್ ಬಾಗ್ ನಾಗರಿಕ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ರೆಹಮತುಲ್ಲಾ, ಕೋಟೆಕಾರು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ್ ಗಾಂಭೀರ್, ಕಾರ್ಯದರ್ಶಿ ಹಮೀದ್, ಕೋಟೆಕಾರು ಪ.ಪಂ ಸದಸ್ಯರುಗಳಾದ ಹಮೀದ್ ಮಾಡೂರು, ಬಾವಾ ಉಮರಂಗಳ, ಲ್ಯಾನ್ಸಿ ಡಿಸೋಜ, ಜೆಸಿಂತಾ, ಪುರುಷೋತ್ತಮ್ ಅಂಚನ್, ಕೋಟೆಕಾರು ಪ.ಪಂ ಮುಖ್ಯಾಧಿಕಾರಿ ಪೂರ್ಣಕಲಾ, ಅಭಿಯಂತರ ದಿನೇಶ್ ಮುಂತಾದವರು ಉಪಸ್ಥಿತರಿದ್ದರು.