UN NETWORKS
ತೊಕ್ಕೊಟ್ಟು: ಗೂಡುದೀಪ ನಿರ್ಮಿಸುವುದು ಸುಲಭದ ಕೆಲಸವಲ್ಲ, ಹಲವು ದಿನದ ಕ್ಲಿಷ್ಟಕರ ಪ್ರಯತ್ನದಿಂದ ಗೂಡುದೀಪ ತಯಾರಿಸುವವರು ಅಭಿನಂದನೆಗೆ ಅರ್ಹರು ಎಂದು ಸಾಮಾಜಿಕ ಮುಂದಾಳು ಸುರೇಶ್ ಭಟ್ನಗರ ಅಭಿಪ್ರಾಯಪಟ್ಟರು.ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಶನಿವಾರ ನಡೆದ11ನೇ ವರ್ಷದ ಗೂಡುದೀಪ ಸಂಗಮ, ದೀಪಾವಳಿ ಸಂಭ್ರಮ ಗೂಡುದೀಪ ಸ್ಪರ್ಧೆ ಸಭಾ ಕಾರ್ಯಕ್ರಮದಲ್ಲಿ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಉಳ್ಳಾಲ ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿ, ಇಂದು ಯಾರಿಗೂ ಸಮಯ ಇಲ್ಲ, ಇಂತಹ ಸಂದರ್ಭದಲ್ಲೂ ಹಲವು ತಿಂಗಳುಗಳನ್ನು ಗೂಡುದೀಪ ತಯಾರಿಕೆಗಾಗಿ ವ್ಯಯಿಸುವ ಕಲಾವಿದರ ಶ್ರಮಕ್ಕೆ ಪೃತಿಷ್ಠಾನ ವೇದಿಕೆ ಕಲ್ಪಿಸಿದೆ. ನಮ್ಮ ಜೀವನದಲ್ಲಿ ಇನ್ನೊಬ್ಬರಿಗೆ ಉಪಕಾರ ಮಾಡಲಾಗದಿದ್ದರೂ ಉಪದ್ರ ಮಾಡದೆ ಮಾನವರಾಗಿ ಬದುಕೋಣ ಎಂದರು.ಕುದ್ರೋಳಿ ಶ್ರೀ ಗೋಕರ್ಣಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಮಧುಸೂಧನ್ ಅಯ್ಯರ್, ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಉದ್ಯಮಿ ಸುದರ್ಶನ್ ಶೆಟ್ಟಿ ನೆತ್ತಿಲಬಾಳಿಕೆ, ಕುಂಪಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪ್ರಕಾಶ್ ಕುಂಪಲ, ಶಿಕ್ಷಕಿ ಹರಿಣಾಕ್ಷಿ ಕೊಲ್ಯ, ಪ್ರಗತಿಪರ ಕೃಷಿಕ ಸುದರ್ಶನ್ ಭಟ್, ಉದ್ಯಮಿಗಳಾದ ಹರೀಶ್ ಉಳ್ಳಾಲಬೈಲ್, ಶ್ರೀಕಾಂತ್ ಗಟ್ಟಿ, ಪ್ರವೀಣ್ ಕಾರ್ಕಳ, ರಾಜೇಶ್ ಸಾಲ್ಯಾನ್, ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಸವೀನ್ ಮುಖ್ಯ ಅತಿಥಿಗಳಾಗಿದ್ದರು. ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಕೇಶ್ ಬೈಪಾಸ್,ಸ್ಥಾಪಕಾಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಪ್ರವೀಣ್ ಕುಂಪಲ ಅಭಿನಂದನಾ ಭಾಷಣ ಮಾಡಿದರು. ಪ್ರದಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ವಂದಿಸಿದರು. ಕೃಷ್ಣ ಪೊನ್ನೆತ್ತೋಡು ಮತ್ತು ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.
‘ಸಣ್ಣ ಪ್ರಾಯದಲ್ಲೇ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದ ಅತಿದೊಡ್ಡ ದೇಶಪ್ರೇಮಿ ಭಗತ್ ಸಿಂಗ್ ಹೆಸರು ಅಜರಾಮರ, ಸಂಘಟನೆಯೂ ಅವರ ಹೆಸರು ಉಳಿಸುವ ಕೆಲಸ ಮಾಡುತ್ತಿದೆ’
ರಮಾನಾಥ ಹೆಗ್ಡೆ, ಆಡಳಿತ ಮೊಕ್ತೇಸರ, ಶ್ರೀ ಮಂಗಳಾದೇವಿ ದೇವಸ್ಥಾನ