UN NETWORKS
ಕೊಣಾಜೆ: ಇಂದು ವಿದ್ಯಾರ್ಥಿಗಳಲ್ಲಿ ಓದಿನ ಹಸಿವು ಕಡಿಮೆಯಾಗುತ್ತಿರುವುದನ್ನು ನಾವು ಗಮನಿಸುತ್ತೇವೆ. ಓದಿನ ಹಸಿವಿಲ್ಲದಿದ್ದರೆ ನಾವು ಓದಿಯೂ ಪ್ರಯೋಜನವಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಜ್ಞಾನವಂತರಾಗಿ ಹೊಸ ಜಗತ್ತನ್ನು ಸೃಷ್ಟಿಸುವವರಂತಾಗಬೇಕು ಎಂದು ಖ್ಯಾತ ಸಾಹಿತಿ ವೈದೇಹಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇಂದು ಜಾತಿ, ಮತ, ಧರ್ಮಗಳ ನಡುವೆ ಮನುಷ್ಯ ಕಾಣುತ್ತಿಲ್ಲ. ಶಿಕ್ಷಣವು ನಮ್ಮಲ್ಲಿ ಉತ್ತಮ ಮನಸ್ಸುಗಳನ್ನು, ಮಾನವೀಯ ನೆಲೆಗಳನ್ನು ರೂಪಿಸದೇ ಇದ್ದರೆ ಶಿಕ್ಷಣದ ಅಗತ್ಯವಿದೇಯೇ? ಶ್ರೀಮಂತಿಯನ್ನು ಬೆಳೆಸಲು ಮಾತ್ರ ಶಿಕ್ಷಣವೇ? ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ನಮಗೆ ನೈಜವಾದ ಜ್ಞಾನದ ಶಿಕ್ಷಣದ ಅಗತ್ಯವಿದೆ. ಅದು ನಮ್ಮಲ್ಲಿ ಮಾನವೀಯ ನೆಲೆಯನ್ನು ಒದಗಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಂತಿರಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಈಶ್ವರ್ ಪಿ. ಅವರು, ಪ್ರತಿಯೊಬ್ಬರಲ್ಲೂ ಕಲಾ ಶಕ್ತಿಯು ಇದ್ದೇ ಇರುತ್ತದೆ. ಕಲೆಯು ನಮ್ಮಲ್ಲಿ ಆರೋಗ್ಯ, ಮನೋಬಲವನ್ನು ಹೆಚ್ಚಿಸುವುದರೊಂದಿಗೆ ನೆಮ್ಮದಿಯುತ ಜೀವನವನ್ನು ನೀಡುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಪ್ರೊ.ಬಾರ್ಕೂರು ಉದಯ ಅವರು ನೂತನವಾಗಿ ವಿದ್ಯಾರ್ಥಿ ಪರಿಷತ್‍ಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತ್‍ನ ಅಧ್ಯಕ್ಷರಾದ ವಿನುತಾ ಎಂ.ಎಸ್, ಉಪಾಧ್ಯಕ್ಷ ನಿತಿನ್ ಎಂ.ಎಂ, ಕಾರ್ಯದರ್ಶಿ ಅಭಿಷೇಕ್ ಬಿ.ಕೆ.ರಾವ್, ಸಹಕಾರ್ಯದರ್ಶಿ ಸುದೀಪ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಹರ್ಷಿತ್ ಪಿ.ಜಿ, ಸಾಂಸ್ಕೃತಿಕ ಸಹ ಕಾರ್ಯದರ್ಶಿ ನಿಧಿ ಎಚ್.ಸಿ. ಉಪಸ್ಥಿತರಿದ್ದರು.
ಪ್ರೊ.ಉದಯ ಬಾರ್ಕೂರು ಸ್ವಾಗತಿಸಿ, ವಿನುತಾ ಎಂ.ಎಸ್ ವಂದಿಸಿದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.