Site icon Ullalavani

ಉಳ್ಳಾಲ : ಶೀಘ್ರದಲ್ಲೆ ಡಯಾಲಿಸ್ ಕೇಂದ್ರ ಸ್ಥಾಪನೆ : ಯು.ಟಿ.ಖಾದರ್

UN NETWORKS

ಉಳ್ಳಾಲ: ಡಯಾಲಿಸ್ ಅವಶ್ಯವಿರುವ ರೋಗಿಗಳಿಗೆ ಉಚಿತವಾಗಿ ಡಯಾಲಿಸ್ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮೇಲ್ದರ್ಜೆಗೇರಿರುವ ಉಳ್ಳಾಲ ಆರೋಗ್ಯ ಕೇಂದ್ರದಲ್ಲಿ ಡಯಾಲಿಸ್ ಕೇಂದ್ರ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಉಳ್ಳಾಲದಲ್ಲಿ ಮೇಲ್ದರ್ಜೆಗೇರಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸ್ ಘಟಕದ ಸ್ಥಾಪನೆಗೆ ಸಂಬಂ„ಸಿದಂತೆ ಪರಿಶೀಲನೆ ನಡೆಸಿ ಮಾತನಾಡಿದ ಅವರು ಪೂರ್ಣ ಪ್ರಮಾಣದ ಆಸ್ಪತ್ರೆಯಾಗಿ ಕಾರ್ಯಾಚರಣೆಗೆ ಬೇಕಾದ ಸಿದ್ಧತೆಗಳು ನಡೆಯುತ್ತಿದ್ದು, ಮೂಲಭೂತ ಸೌಕರ್ಯದ ಅಭಿವೃದ್ಧಿಯನ್ನು ಹಂತ ಹಂತವಾಗಿ ಪೂರೈಸಲಾಗುತ್ತಿದೆ. ಆಸ್ಪತ್ರೆಗೆ ಸಂಬಂಧಿಸಿದ ಸಿಬ್ಬಂದಿಗಳ ನೇಮಕಕ್ಕೆ ಸರಕಾರ ಆದೇಶ ಹೊರಡಿಸಲಿದ್ದು, ಶೀಘ್ರವೇ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಲಿದೆ ಎಂದರು.

ಆಯುರ್ವೇದ ಥೆರಪಿಗೆ ಆದ್ಯತೆ : ಆಸ್ಪತ್ರೆಯಲ್ಲಿ ಆಯುರ್ವೇದ ಮತ್ತು ಯುನಾನಿ ಚಿಕಿತ್ಸೆಗೆ ಆದ್ಯತೆ ನೀಡುತ್ತಿದ್ದು ಪ್ರಥಮ ಹಂತದಲ್ಲಿ ಆಯುರ್ವೇದ ಥೆರಪಿ, ಪಂಚಕರ್ಮಕ್ಕೆ ಆದ್ಯತೆ ನೀಡಲಾಗುವುದು. ಇದರೊಂದಿಗೆ ಎಲ್ಲಾ ವಿಭಾಗದಲ್ಲಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ರೂಪಿಸಲಾಗುವುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್, ಸಹಾಯಕ ಅಭಿಯಂತರ ಅಶೋಕ್,ಇಂಜಿನಿಯರ್ ಅನ್ಸಾರ್, ನಗರ ಸಭೆ ಸದಸ್ಯರಾದ ಅಯುಬ್ ಮಂಚಿಲ, ಇಸ್ಮಾಯಿಲ್ ಅಳೇಕಲ, ಮುಹಮ್ಮದ್ ಮುಕ್ಕಚೇರಿ, ರವಿಚಂದ್ರ ಗಟ್ಟಿ, ಅಶ್ರಫ್ ಮಾಸ್ತಿಕಟ್ಟೆ, ಬಶೀರ್, ಭಾರತಿ, ಸಪ್ನ ಹರೀಶ್, ಬಾಝಿಲ್ ಡಿಸೋಜ, ಸತ್ಯವತಿ, ವಾರಿಜ ಬಾಪು ಸುವರ್ಣ, ಅಝೀಝ್ ಮೋಗವೀರ ಮುಂದಾಳು ಬಾಬು ಸುವರ್ಣ, ಮಸೀದಿ ಅಧ್ಯಕ್ಷ ಯು.ಕೆ ಅಬ್ಬಾಸ್ ಕೋಟೆಪುರ, ಮೋದ್ದೀನ್ ಹಸನ್ ಪೇಟೆ, ಹಮೀದ್ ಅಬ್ಬಾಸ್ ಕೋಡಿ, ಮಾಜಿ ಸದಸ್ಯರಾದ ಉಸ್ಮಾನ್ ಕಲ್ಲಾಪು, ಪೊಡಿಮೋನು, ಉದ್ಯಮಿ ನಝೀರ್ ಅಬ್ಬಾಸ್ ಕೋಡಿ, ಅಹ್ಮದ್ ಬಾವ ಕೊಟ್ಟಾರ ಉಪಸ್ಥಿತರಿದ್ದರು.

Exit mobile version