Site icon Ullalavani

ಸಂತಾಪ

 

 
ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಇತ್ತೀಚೆಗೆ ನಿಧನರಾದ ಲೋಕನಾಥ ಗಟ್ಟಿಯವರ ಸಂತಾಪ ಸೂಚಕ ಸಭೆಯು ಕೊಲ್ಯ ಸೋಮೇಶ್ವರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು.


ಬಿಲ್ಲವ ಸೇವಾ ಸಮಾಜದ ಮಾಜಿ ಅಧ್ಯಕ್ಷ ರಮಾನಾಥ ಕೋಟೆಕಾರ್ ಮಾತನಾಡಿ ಜಾತಿ ಭೇದವಿಲ್ಲದೆ ಎಲ್ಲರೊಂದಿಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲಿ ಭಜನಾ ಸಂಕೀರ್ತನೆಗಳು ನಡೆದರೂ ತಪ್ಪದೇ ಭಾಗವಹಿಸುತ್ತಿದ್ದ ದಿ. ಲೋಕನಾಥ ಗಟ್ಟಿಯವರ ನಿಧನದಿಂದ ಈ ಪ್ರದೇಶದ ಒಬ್ಬ ಭಜನಾ ಸಂಕೀರ್ತನಕಾರರನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದರು.
ಉಳ್ಳಾಲ ಅವಿನಾಶ್ ಗ್ಯಾಸ್ ಏಜೆನ್ಸೀಸ್ ನ ಮಾಲಕರು ಹಾಗೂ ಸಿಬ್ಬಂದಿವರ್ಗದವರು ೪೮೦೦೦ ರೂ. ಗಳನ್ನು ಮೃತರ ಕುಟುಂಬಕ್ಕೆ ನೀಡಿದರು.
ಸಂತಾಪ ಸಭೆಯಲ್ಲಿ ಗುರಿಕಾರ ನಾರಾಯಣ ಗಟ್ಟಿ, ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಾಳಪ್ಪ ಪೂಜಾರಿ, ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಾಯ ಗಟ್ಟಿ, ಉಳ್ಳಾಲ ಜಾಗೃತ ವಿವಿದೋದ್ಧೇಶ ಸಂಘದ ಅಧ್ಯಕ್ಷ ರಘುಚಂದ್ರ ಬಲ್ಲಾಳ್ ಉಪಸ್ಥಿತರಿದ್ದರು.

Exit mobile version