Site icon Ullalavani

ಅಂಬಿಕಾರೋಡ್ : ಮನೆಯಿಂದ ಕಳವು

UN NETWORKS

ಉಳ್ಳಾಲ: ಮನೆ ಮಂದಿಯೆಲ್ಲ ಮಲಗಿದ್ದ ವೇಳೆಯೇ ಮನೆ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು 9 ಪವನ್ ಚಿನ್ನ, 1 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆ ಅಂಬಿಕಾರೋಡ್ ಲೇಔಟ್ ಬಿ.ಬ್ಲಾಕಲ್ಲಿ ಬುಧವಾರ ತಡರಾತ್ರಿ ನಡೆದಿದೆ. ನಿರ್ಮಲ ಬಡಾವಣೆ ನಿವಾಸಿ ನವೀನ್ ಗಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.

ನವೀನ್ ಅವರು ಪತ್ನಿ ಉಷಾ ಮತ್ತು ಮಗ ಚಿರಾಗ್ ನೊಂದಿಗೆ ಬುಧವಾರ ರಾತ್ರಿ ಊಟ ಮುಗಿಸಿ ಒಂದೇ ಕೋಣೆಯಲ್ಲಿ ಮಲಗಿದ್ದರು.ಪಕ್ಕದ ಕೋಣೆಯಲ್ಲಿ ಉಷಾರ ತಾಯಿ (ನವೀನ್ ಅವರ ಅತ್ತೆ) ವಿಮಲಾ ಅವರು ಮಲಗಿದ್ದು ಎರಡೂ ಕೋಣೆಗಳ ಬಾಗಿಲು ತೆರೆದಿತ್ತೆನ್ನಲಾಗಿದೆ.ಮನೆ ಹಿಂಬಾಗಿಲಿನ ಕಿಟಕಿಯ ಬಾಗಿಲು ತೆರೆದಿದ್ದು ಇದರ ಲಾಭ ಪಡೆದ ಕಳ್ಳರು ಕಿಟಕಿಯ ಮೂಲಕ ಹಿಂಬಾಗಿಲಿನ ಒಳಗಿನ ಚಿಲಕ ಸರಿಸಿ ಬಾಗಿಲು ತೆರೆದು ಒಳ ನುಗ್ಗಿದ್ದು, ನವೀನ್ ಅವರು ಮಲಗಿದ್ದ ಕೋಣೆಗೆ ನುಗ್ಗಿ ಟೇಬಲ್ ಮೇಲಿಟ್ಟಿದ್ದ ಉಷಾರವರ 6 ಪವನ್ ತೂಕದ ಕರಿಮಣಿ ಸರ, ಶೋಕೇಸ್ ನಲ್ಲಿಟ್ಟಿದ್ದ 3 ಪವನ್ ತೂಕದ ವಿದೇಶಿ ಸರ, ಮತ್ತು ಉಷಾರವರ ಬ್ಯಾಗ್ ನಲ್ಲಿದ್ದ 500 ರೂಪಾಯಿ ಮತ್ತು ಮಗ ಚಿರಾಗ್ ಪರ್ಸಲ್ಲಿದ್ದ 500 ರೂಪಾಯಿ ನಗದು ದೋಚಿ ಬ್ಯಾಗನ್ನು ಮನೆ ಹೊರಗಿನ ಬಟ್ಟೆ ಒಗೆಯುವ ಕಲ್ಲಿನ ಮೇಲಿಟ್ಟು ಪರಾರಿಯಾಗಿದ್ದಾರೆ.
ಉಷಾರವರು ವೆನ್ಲಾಕ್ ಸರಕಾರಿ ಆಸ್ಪತ್ರೆಯ ಉದ್ಯೋಗಿಯಾಗಿದ್ದು ಗುರುವಾರದಂದು ಕುಟುಂಬದ ಕಾರ್ಯಕ್ರಮಕ್ಕೆ ತೆರಳಿರುವ ಕಾರಣ ಆಭರಣಗಳನ್ನು ಟೇಬಲ್ ಮತ್ತು ಶೋಕೆಸ್ ನಲ್ಲಿಯೇ ಇರಿಸಿ ಮಲಗಿದ್ದರು. ಶೋಕೇಸ್ ನಲ್ಲಿ ಚೈನ್ ಜೊತೆ ರೋಲ್ಡ್ ಗೋಲ್ಡ್ ಬಳೆ ಕೂಡಾ ಇಟ್ಟಿದ್ದರು. ಆದರೆ ಬಳೆ ರೋಲ್ಡ್ ಗೋಲ್ಡ್ ಎಂದು ಅರಿತ ಕಳ್ಳರು ಅದನ್ನು ಅಲ್ಲೇ ಬಿಟ್ಟಿದ್ದಾರೆ.

ಸ್ಥಳಕ್ಕೆ ಉಳ್ಳಾಲ ಠಾಣಾ ಸಬ್ ಇನ್ಸ್ ಪೆಕ್ಟರ್ ವಿನಾಯಕ ತೋರಗಲ್, ಗುರುವಪ್ಪ ಕಾಂತಿ ಮತ್ತು ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸಿ ಪ್ರಕರಣ ದಾಖಲಾಸಿದ್ದಾರೆ.

Exit mobile version