Site icon Ullalavani

ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ನಿಂದ ಸಹನಾ ಕುಮಾರಿಗೆ ಪ್ರೋತ್ಸಾಹ ಧನ

ಉಳ್ಳಾಲ್ ನ್ಯೂಸ್ ಡೆಸ್ಕ್

ಉಳ್ಳಾಲ: ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್‌ನಲ್ಲಿ ಎತ್ತರ ಜಿಗಿತದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಉಳ್ಳಾಲ ಮೂಲದ ಸಹನಾ ಕುಮಾರಿ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರಸ್ ವತಿಯಿಂದ ೨೫ ಸಾವಿರ ಪ್ರೋತ್ಸಾಹ ಧನವನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಗಳ ಅಧ್ಯಕ್ಷ ದಿನೇಶ್ ಕುಂಪಲ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಳ್ಳಾಲ ನಗರಸಭಾ ಅಧ್ಯಕ್ಷೆ ಗಿರಿಜಾ ಬಾ, ಉಪಾಧ್ಯಕ್ಷೆ ರಝೀಯಾ ಇಬ್ರಾಹಿಂ, ಸದಸ್ಯ ಸುಕುಮಾರ್, ತಾ. ಪಂ. ಸದಸ್ಯರಾದ ಸುರೇಖಾ ಚಂದ್ರಹಾಸ್, ಸುರೇಶ್ ಭಟ್ನಗರ, ಪಿಯೂಷ್ ಮೊಂತೇರೋ ಮತ್ತಿತರರು ಉಪಸ್ಥಿತರಿದ್ದರು.

Exit mobile version