Site icon Ullalavani

ಸೋಮೇಶ್ವರ ಬಟ್ಟಪ್ಪಾಡಿ ಅಳಿವೆಯಲ್ಲಿ ಹೂಳು ತೆರವು

UN NETWORKS

ಉಳ್ಳಾಲ: ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಅಳಿವೆಯಲ್ಲಿ ಹೂಳು ಸಮಸ್ಯೆಯಿಂದ ಉಂಟಾಗಿದ್ದ ಕೃತಕ ನೆರೆ ಹಾವಳಿಗೆ ಸಂಬಂಧಿಸಿದಂತೆ ಸೋಮೇಶ್ವರ ಗ್ರಾಮ ಪಂಚಾಯತ್ ಆಡಳಿತ ಬುಧವಾರ ಸ್ಪಂದನೆ ನೀಡಿದ್ದು ಬಟ್ಟಪ್ಪಾಡಿ ಬಳಿ ತುಂಬಿರುವ ಹೂಳನ್ನು ಹಿಟಾಚಿ ಮೂಲಕ ತೆಗೆಯುವ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ.

ಕಳೆದೆರಡು ದಿನಗಳಿಂದ ಬಟ್ಟಪ್ಪಾಡಿ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿ ಸೋಮೇಶ್ವರ ಬಳಿಯ ಹೊಳೆ ಸಮೀಪದ ಮನೆಗಳು ಕೃತಕ ನೆರೆಯಿಂದ ಜಲಾವೃತಗೊಂಡಿತ್ತು. ಬುಧವಾರ ಸಮಸ್ಯೆ ತೀವ್ರವಾದಾಗ ಸ್ಥಳೀಯರು ಆಕ್ರೋಶಿತಗೊಂಡಿದ್ದು ಬಳಿಕ ತಹಶೀಲ್ದಾರ್ ಗುರುಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಹೂಳು ತೆಗೆಯುವಂತೆ ಸೋಮೇಶ್ವರ ಗ್ರಾಮ ಪಂಚಾಯತ್‍ಗೆ ಆದೇಶ ನೀಡಿದ್ದರು.

ತಾತ್ಕಾಲಿಕ ಸಮಸ್ಯೆ ಪರಿಹಾರ : ಸೋಮೇಶ್ವರ ಗ್ರಾಮ ಪಂಚಾಯತ್‍ನಿಂದ ಬುಧವಾರ ಬೆಳಗ್ಗಿನಿಂದಲೇ ಬಟ್ಟಪ್ಪಾಡಿಯಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನಿಇಡಲಾಗಿತ್ತು. ಒಂದು ಹಿಟಾಚಿ ಸಂಜೆವರೆಗೆ ಹೂಳು ತೆಗೆಯುವ ಕಾರ್ಯ ಮುಗಿಸಿದ್ದು ಹೊಳೆಯ ನೀರು ಸಮುದ್ರಕ್ಕೆ ಹರಿಯಲು ಆರಂಭಿಸಿದ್ದು ಕೃತಕ ನೆರೆ ತೆರವಾಗಿದ್ದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.ಸ್ಥಳದಲ್ಲಿದ್ದ ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್ ಮಾತನಾಡಿ ಬಟ್ಟಪ್ಪಾಡಿ ಅಳಿವೆ ಬಾಗಿಲಿನಲ್ಲಿ ಪ್ರಾರಂಭದ ಹಂತದಲ್ಲಿ ಹೂಳು ತೆಗೆದು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗಿದೆ. ನೀರಿನ ಹರಿವು ಕಡಿಮೆಯಾದ ಬಳಿಕ ಈ ಸಮಸ್ಯೆ ಉದ್ಭವಿಸುವುದಿಲ್ಲ. ಈ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಹೊಳೆ ಬದಿಯಲ್ಲಿ ನೀರು ಇಂಗಿದಾಗ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರವಾಗುತ್ತದೆ ಎಂದರು. ಈ ಸಂದಭರದಲ್ಲಿ ಪಂಚಾಯತ್ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version