Site icon Ullalavani

ಗ್ರಾಮೀಣ ಭಾಗದ ಶಸ್ತ್ರಚಿಕಿತ್ಸಕರನ್ನು ಗುರುತಿಸುವ ಕಾರ್ಯ ನಡೆಯಬೇಕು:ಆಸ್ರಿಕಾನ್ ಅಧ್ಯಕ್ಷ ಡಾ. ಜಿ.ಎಸ್. ಜ್ಞಾನಗುರು ಸ್ವಾಮಿ

UN NETWORKS

ದೇರಳಕಟ್ಟೆ: ಗ್ರಾಮೀಣ ಭಾಗದ ಶಸ್ತ್ರಚಿಕಿತ್ಸಕರು ನಗರದ ವೈದ್ಯರಂತೆ ಹೆಚ್ಚಿನ ಜ್ಞಾನ ಹೊಂದಿದ್ದರೂ ಅವರನ್ನು ಗುರುತಿಸುವ ಕಾರ್ಯ ನಡೆದಿಲ್ಲ. ಗ್ರಾಮೀಣ ಭಾಗ ಹಾಗೂ ನಗರದ ವೈದ್ಯರ ನಡುವಿನ ವೈದ್ಯರ ಹೊಂದಾಣಿಕೆಯ ಕೊರತೆಯನ್ನು ಸರಿದೂಗಿಸಲು ರಾಷ್ಟ್ರಮಟ್ಟದಲ್ಲಿ ಗ್ರಾಮೀಣ ಶಸ್ತ್ರಚಿಕಿತ್ಸಾ ತಜ್ಞರ ರಾಷ್ಟ್ರಮಟ್ಟದ ಎಸೋಸಿಯೇಶನ್ ಆರಂಭಿಸಲಾಯಿತು ಎಂದು ಡಾ. ಗ್ರಾಮೀಣ ಶಸ್ತ್ರಚಿಕಿತ್ಸಾ ತಜ್ಞರ ರಾಷ್ಟ್ರಮಟ್ಟದ ಎಸೋಸಿಯೇಶನ್ ಅಧ್ಯಕ್ಷ ಡಾ. ಜಿ.ಎಸ್. ಜ್ಞಾನಗುರು ಸ್ವಾಮಿ ಹೇಳಿದರು.

ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಶಸ್ತ್ರಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಕ್ಷೇಮ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿಎರಡು ದಿನಗಳ ಕಾಲ ನಡೆದ ಗ್ರಾಮೀಣ ಭಾಗದ ಶಸ್ತ್ರಚಿಕಿತ್ಸಕ ತಜ್ಞರ ರಾಷ್ಟ್ರೀಯ ಸಮ್ಮೇಳನ “ಆಸ್ರಿಕಾನ್” -2018ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಜನರ ಜೊತೆಗೆ ಬೆರೆತು ಅವರಿಗೆ ಉತ್ತಮ ಗುಣಮಟ್ಟದ ಸೇವೆ ನೀಡಲು ಶ್ರಮಿಸಬೇಕು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದು ಅಷ್ಟೊಂದು ಸುಲಭ ಸಾಧ್ಯವಿಲ. ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು ಎಂದು ನುಡಿದರು.ಕ್ಷೇಮ ಡೀನ್ ಪ್ರೊ. ಡಾ. ಪಿ.ಎಸ್. ಪ್ರಕಾಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕ್ಷೇಮ ವತಿಯಿಂದ ಈಗಾಗಲೇ ಕೇರಳ ಕರ್ನಾಟಕ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಒಟ್ಟು ಹದಿನೆಂಟು ಸೇವಾ ಕೇಂದ್ರ ಕಾರ್ಯಾಚರಿಸುತ್ತಿದೆ. 1500ಮಾನಿಸಿಮ ರೋಗಿಗಳು ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ಪಡೆಯುತ್ತಿದಾರೆ ಎಂದರು.

ಕ್ಷೇಮ ಶಸ್ತ್ರಚಿಕಿತ್ಸಾ ತಜ್ಞ ಪ್ರೊ.ಡಾ. ರಾಜೇಶ್ ಬಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು.ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಹೀರೆಮಠ ಉಪಸ್ಥಿತರಿದ್ದರು. ಡಾ. ನವ್ಯಶ್ರೀ ಹಾಗೂ ಡಾ. ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು.ಕ್ಷೇಮ ಮೆಡಿಕಲ್ ಅಕಾಡೆಮಿ ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥ ಹಾಗೂ ಆಸ್ರಿಕಾನ್ ಕಾರ್ಯದರ್ಶಿ ಪ್ರೊ. ಡಾ. ರಾಜಶೇಖರ್ ಮೋಹನ್ ವಂದಿಸಿದರು.

ಎಸೋಸಿಯೇಶನ್ ನಿಜವಾಗಿಯೂ ಹೆಚ್ಚು ಪ್ರಚಲಿತದಲ್ಲಿರಬೇಕಾಗಿದ್ದರೂ ಸದಸ್ಯರ ಬಲ ಕಡಿಮೆ ಇದೆ. ದೇಶವ್ಯಾಪಿ ಕೇವಲ ಐನೂರು ಸದಸ್ಯರನ್ನು ಹೊಂದಿದ್ದರೂ ಕೂಡಾ ತೀರಾ ಹಿಂದುಳಿದ ಗ್ರಾಮಗಳಲ್ಲಿಯೂ ಆರೋಗ್ಯ ಸೇವೆಗೆ ಸಂಬಂಧಿಸಿದ ಶಿಬಿರಗಳನ್ನು ನಡೆಸಿರುವ ಕೀರ್ತಿ ಎಸೋಸಿಯೇಶನ್‍ಗಿದೆ. ಇತ್ತೀಚೆಗೆ ಮಹಾರಾಷ್ಟ್ರದ ಸಮುದ್ರ ತೀರದಲ್ಲಿ ನಡೆಸಿರುವ ಶಿಬಿರದಲ್ಲಿ ಆರೋಗ್ಯ ಕುರಿತಾದ ಸೌಲಭ್ಯ ವಂಚಿತರಿಗೆ ಶಿಬಿರ ಸಹಕಾರಿಯಾಯಿತು. ರಕ್ತ ಸೇರಿದಂತೆ ವಿವಿಧ ಆರೋಗ್ಯ ಸಂಬಂಧಿ ಕೊರತೆಗಳಿದ್ದರೂ ಲಭ್ಯವಿರುವ ಪರಿಕರಗಳೊಂದಿಗೆ ಶಿಬಿರ ನಡೆಸಲಾಗಿದೆ. ಯುವ ವೈದ್ಯರು ಎಸೋಸಿಯೇಶನ್ ಜೊತೆಗೆ ಕೈಜೋಡಿಸುವ ಮೂಲಕ ಗ್ರಾಮೀಣ ಭಾಗದ ಜನರನ್ನು ಆರೋಗ್ಯವಂತರನ್ನಾಗಿಸಬಹುದು.

ಪ್ರೊ. ಡಾ. ರಾಜಶೇಖರ್ ಮೋಹನ್
ಮುಖ್ಯಸ್ಥರು,ಶಸ್ತ್ರಚಿಕಿತ್ಸಾ ವಿಭಾಗ
ಕ್ಷೇಮ ಮೆಡಿಕಲ್ ಅಕಾಡೆಮಿ

Exit mobile version