UN NETWORKS
ತಲಪಾಡಿ: ಥಾಯ್ಲೆಂಡ್‍ನಲ್ಲಿ ನಡೆದ ಅಂತರಾಷ್ಟ್ರೀಯ ಟಿಕ್ವಾಂಡೋಂ ಚಾಂಪಿಯನ್‍ಶಿಪ್‍ನಲ್ಲಿ ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಸ್ಪರ್ಧಿಸಿ ಮೂರು ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಮೂರು ಬೆಳ್ಳಿ ಮತ್ತು ಕಂಚಿನ ಪದಕ
ಮಹಾರಾಷ್ಟ್ರದ ಪುಣೆಯ ಛತ್ರಪತಿ ಅಂತರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಟಿಕ್ವಾಂಡೋಂ ಚಾಂಪಿಯನ್ ಶಿಪ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಸಂಕಪ್, ಅಭಯಾನಂದ ವಿ.ಸಿ., ಎನ್ ಶ್ರೇಯಾ ಪ್ರಸಾದ್ ತಲಾ ಎರಡು ಚಿನ್ನದ ಪದಕ ಪಡೆದುಕೊಂಡರೆ, ಇಶಾಂತ್ ಬಾಯರಿ, ಶಶಾಂಕ್ ಆರ್. , ಸೃಷ್ಟಿ, ಎಂ.ಲೊಕಿನ್‍ತಲಾ ಒಂದು ಚಿನ್ನ ಒಂದು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ನಿಕ್ಷೇಪ್ ಗೌಡ, ಗೌರವ್ ಜೆ., ರಿಧಿಶ್ರೀ ತಲಾ ಒಂದು ಚಿನ್ನ, ಒಂದು ಕಂಚಿನ ಪದಕ ಪಡೆದುಕೊಂಡಿದ್ದು, ಸಾಗರ್ ಜಿ.ಕೆ., ಚರಣ್ ಪಿ., ಸುಪ್ರಿತ್ ಎಸ್. ಸಂಹಿತಾ ತಲಾ ಎರಡು ಬೆಳ್ಳಿ ಪದಕ, ಆಶೀಶ್, ಪುನೀತ್ ಗೌಡ,. ಸಿದ್ದಾಂತ್, ವಿಕಾಸ್ ಪಿ. ತಲಾ ಒಂದು ಬೆಳ್ಳಿ ಮತ್ತು ಒಂದು ಕಂಚು, ಬಿಂದು, ಸಂಚಿತ್ ಸೂರ್ಯ ಬಿ.ಎಚ್. ತಲಾ ಎರಡು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಇವರು ಕೃಷ್ಣ ಜೆ.ನಾೈಕ್ ಅವರಿಂದ ತರಬೇತು ಪಡೆದಿದ್ದರು.