Site icon Ullalavani

ಮರ್ಹೂಂ ಹಂಝಾ ಅಫ್ನಾನ್ ರವರಿಗೆ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಸಮಿತಿ ವತಿಯಿಂದ ಸಂತಾಪ ಸಭೆ

UN NETWORKS

ಪುತ್ತೂರು: ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಇದರ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ಎಸ್.ಡಿ.ಪಿ.ಐ ಪುತ್ತೂರು ನಗರಾಧ್ಯಕ್ಷರಾದ ಹಂಝಾ ಅಫ್ನಾನ್ ರವರ ಸಾರ್ವಜನಿಕ ಸಂತಾಪ ಸಭೆಯು ಪುತ್ತೂರು ಟೌನ್ ಬ್ಯಾಂಕ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಕೆ.ಎ ಸಿದ್ಧೀಕ್ ವಹಿಸಿದರು.

ಪುತ್ತೂರು ವಿದಾನಭಾ ಸಮಿತಿ ಉಪಾದ್ಯಕ್ಷರಾದ ಇಬ್ರಾಹಿಂ ಹಾಜಿ ಸಾಗರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸಂತಾಪ ಸೂಚಿಸಿದರು.
ಎಸ್.ಡಿ.ಪಿ.ಐ ರಾಜ್ಯ ಉಪಾದ್ಯಕ್ಷರಾದ ಮಜೀದ್ ಖಾನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆ, SDPI ಜಿಲ್ಲಾ ಉಪಾದ್ಯಕ್ಷ ಆನಂದ ಮಿತ್ತಬೈಲ್,SDPI ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ರಿಜ್ವಾನ್, SDPI ಜಿಲ್ಲಾ ಸಮಿತಿ ಸದಸ್ಯರಾದ ಜಾಬೀರ್ ಅರಿಯಡ್ಕ, ಪುತ್ತೂರು ನಗರ ಸಭಾ ಸದಸ್ಯೆ ಕೆ ಫಾತಿಮತ್ ಝೂರಾ ಹಾಗೂ ಹಲವಾರು ನಾಯಕರು ಅಗಲಿದ ನಾಯಕನಿಗೆ ಸಂತಾಪ ಸೂಚಿಸಿದರು. ವೇದಿಕೆಯಲ್ಲಿ ಪಕ್ಷದ ನಾಯಕರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು,ಹಿತೈಷಿಗಳು,ಹಂಝಾ ಅಫ್ನಾನ್ ರವರ ಅಭಿಮಾನಿಗಳು ಭಾಗವಹಿಸಿದ್ದರು.

ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಶಾಕಿರ್ ಅಳಕೆಮಜಲು ಸ್ವಾಗತಿಸಿ ,ಇಕ್ಬಾಲ್ ಕೆಂಪಿ ಧನ್ಯವಾದಗೈದರು, ವಿದಾನಸಭಾ ಸಮಿತಿ ಕಾರ್ಯದರ್ಶಿ ಹಮೀದ್ ಮೆಜೆಸ್ಟಿಕ್, ರಝಾಕ್ ಸಾಲ್ಮರ ಕಾರ್ಯಕ್ರಮವನ್ನು ನಿರೂಪಿಸಿದರು

Exit mobile version